ಕರ್ನಾಟಕ

ಚೆಲುವರಾಯಸ್ವಾಮಿ ಬಿಜೆಪಿಗೆ? ಬಿಎಸ್‍ವೈ ಮಾತುಗಳಲ್ಲಿ ಅಡಗಿದೆಯಾ ರಹಸ್ಯ?

ಬೆಂಗಳೂರು (ಅ.27): ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಅವರ ಪರ ಮಾತನಾಡಿದ್ದು, ಇದೀಗ ಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವರೇ ಎಂಬ ಸಂಶಯ ಎಲ್ಲರಲ್ಲಿ ಮೂಡುವಂತೆ ಮಾಡಿದೆ.

ಸಭೆಯಲ್ಲಿ ಮಾತನಾಡಿದ ಬಿ.ಎಸ್.ವೈ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಪರ ಮಾತನಾಡಿದರು. ಸ್ವಾಮಿಯನ್ನು ಸೋಲಿಸಿ ಕಾಂಗ್ರೆಸ್ ಅವರಿಗೆ ಅಪಮಾನ ಮಾಡಿದೆ. ಇದು ಸರಿಯಲ್ಲ. ಅವರಿಗೆ ಮುಂದೆ ಭವಿಷ್ಯ ಇದೆ ಎಂದರು.

ಈ ವೇಳೆ ಕಾರ್ಯಕರ್ತರು ಚಲುವರಾಯಸ್ವಾಮಿ ಪರ ಜೈಕಾರ ಕೂಗಿದರು. ಚಲುವರಾಯಸ್ವಾಮಿಗೆ ಆಗಿರುವ ಅಪಮಾನದ ಸಂಗತಿಯು ನಮ್ಮ ಅಭ್ಯರ್ಥಿ ಗೆಲುವಿಗೆ ಕಾರಣವಾಗುತ್ತದೆ. ಹಣ ಬಲದ ಮೇಲೆ ನಾವು ರಾಜಕಾರಣ ಮಾಡುತ್ತಿಲ್ಲ. ಜನರ ಪ್ರೀತಿ, ವಿಶ್ವಾಸ ಗಳಿಸುವ ಶಕ್ತಿ ಇದೆ ಎಂದು ಈ ಸಂದರ್ಭದಲ್ಲಿ ಯಡಿಯೂರಪ್ಪ ತಿಳಿಸಿದರು. ಇವೆಲ್ಲ ಮಾತುಗಳು ಚಲುವರಾಯಸ್ವಾಮಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ತೆಕ್ಕೆಗೆ ಬೀಳುವರೇ ಎಂಬ ಅನುಮಾನ ಮೂಡಿಸಿದವು. (ಎನ್.ಬಿ)

Leave a Reply

comments

Related Articles

error: