ಸುದ್ದಿ ಸಂಕ್ಷಿಪ್ತ
“ಹೊಸ ನಾಳೆ ಕಾವ್ಯ ಬೆಳೆ”
ಕರ್ನಾಟಕ ಕಾವಲು ಪಡೆ ವತಿಯಿಂದ “ಹೊಸ ನಾಳೆ ಕಾವ್ಯ ಬೆಳೆ” ಶೀರ್ಷಿಕೆ ಜೊತೆ ನೂತನ ವರ್ಷದ ಸ್ವಾಗತಕ್ಕಾಗಿ ಕವಿಗೋಷ್ಠಿ ನಡೆಯಲಿದೆ. ಡಿಸೆಂಬರ್ 31ರ ಶನಿವಾರ ಸಂಜೆ 4 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ.ಕವಿತಾ ರೈ, ಡಾ.ಮಳಲಿ ವಸಂತ ಕುಮಾರ್, ಎಂ.ಮೋಹನ್ಕುಮಾರ್ ಗೌಡ, ಟಿ. ಸತೀಶ್ಜವರೇಗೌಡ, ಕೆ.ಶಶಿಕುಮಾರ್, ಡಾ.ಕೋಕಿಲ, ಡಾ.ಎಂ.ಪಿ.ವರ್ಷ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವರಾರು ಕವಿಗಳು ಕಾರ್ಯಕ್ರಮದಲ್ಲಿ ತಮ್ಮ ಕವಿತೆಗಳನ್ನು ವಾಚಿಸುವರು.