ಸುದ್ದಿ ಸಂಕ್ಷಿಪ್ತ
ಜಿಎನ್ಆರ್ ಅಕಾಡಮಿ ವಾರ್ಷಿಕೊತ್ಸವ
ಕೃಷ್ಣ ವಿಲಾಸ ರಸ್ತೆಯಲ್ಲಿರುವ ಜಿಎನ್ಆರ್ ಅಕಾಡಮಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೂಡ ಕಚೇರಿ ಎದುರು ಇರುವ ರೋಟರಿ ಪಶ್ಚಿಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ 31ರ ಶನಿವಾರ ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸಮಾರಂಭದಲ್ಲಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.