ಕರ್ನಾಟಕಮನರಂಜನೆ

ಶ್ರುತಿ ಹರಿಹರನ್ ಗೆ ವಿವಾಹವಾಗಿದೆ.!

ಬೆಂಗಳೂರು,ಅ.27-ನಟಿ ಶ್ರುತಿ ಹರಿಹರನ್ ಅವರಿಗೆ ವಿವಾಹವಾಗಿದೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಶ್ರುತಿ, ಅರ್ಜುನ್ ವಿರುದ್ಧ ನೀಡಿರುವ ದೂರಿನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ವಿಶೇಷ ಎಂದರೆ ಇಷ್ಟು ದಿನ ಶ್ರುತಿ ಹರಿಹರನ್ ಅವರಿಗೆ ಮದುವೆಯಾಗಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈಗ ಅವರಿಗೆ ಮದುವೆಯಾಗಿದೆ ಎಂಬುದು ತಿಳಿದುಬಂದಿದೆ. ದೂರಿನ ಪ್ರತಿಯಲ್ಲಿ ಶ್ರುತಿ ಹರಿಹರನ್ w/o ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಒಟ್ಟಾರೆ ಅವರಿಗೆ ಮದುವೆಯಾಗಿದೆ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

ಮೀಟೂ ಆರೋಪ ಮಾಡಿದ್ದ ಶ್ರುತಿ ಮೇಲೆ ಅರ್ಜುನ್ ಸರ್ಜಾ ಮಾನನಷ್ಟು ಮೊಕದ್ದಮೆ ದಾಖಲಿಸಿದ್ದು, ಇದೀಗ ಶ್ರುತಿ ತಮ್ಮ ವಕೀಲರೊಂದಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ ಅರ್ಜುನ್ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. 5 ಪುಟಗಳಷ್ಟು ದೂರಿನ ಪ್ರತಿಯನ್ನು ಶ್ರುತಿ ಸಲ್ಲಿಸಿದ್ದಾರೆ.

ಅರ್ಜುನ್ಸರ್ಜಾ ವಿರುದ್ಧ ಸೆಕ್ಷನ್‌ 354(ಲೈಂಗಿಕ ಕಿರುಕುಳ), ಸೆಕ್ಷನ್‌ 354 (ಮಾನಹಾನಿಗೆ ಯತ್ನ) 509 ( ಮಾನಹಾನಿಕರ ನಿಂದನೆ )ರಡಿ ಎಫ್ಐಆರ್ದಾಖಲು ಮಾಡಲಾಗಿದೆ.

2015 ರಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ಯುಬಿ ಸಿಟಿಯ ಪಬ್ವೊಂದರಲ್ಲಿ ನನ್ನ ತೊಡೆ ಮತ್ತು ಪ್ರಷ್ಠ ಭಾಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದು, ನಾನು ಅಂದು ಮೌನವಾಗಿ ನರಳಿದೆ.ನನಗೆ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಆಗಲಿಲ್ಲ. ಯಾಕೆಂದರೆ ನಾನು ಆಗಷ್ಟೆ ಬೆಳೆಯುತ್ತಿರುವ ನಟಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಅರ್ಜುನ್ಸರ್ಜಾ ಚಿತ್ರರಂಗ ಮತ್ತು ಹೊರಗಡೆಯೂ ಪ್ರಭಾವೀ ವ್ಯಕ್ತಿಯಾಗಿದ್ದರು. ನಾನು ಪ್ರತಿಕ್ರಿಯಿಸುವ ಮುನ್ನವೇ ಅವರು ಮತ್ತೊಮ್ಮೆ ನನ್ನ ಬರಸೆಳೆದರು. ನನ್ನನ್ನು ತೋಳಿನಿಂದ ಬಳಸಿಕೊಂಡು ಶೂಟಿಂಗ್ಗೆ ಕಳುಹಿಸಿದರು ಎಂದು ಹೇಳಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: