ಮನರಂಜನೆ

ಮ್ಯೂಸಿಕ್ ಥೆರಪಿ ಪಡೆಯುತ್ತಿದ್ದಾರಂತೆ ನಟಿ ಸೋನಾಲಿ ಬೇಂದ್ರೆ

ದೇಶ(ನವದೆಹಲಿ)ಅ.27:- ಸಂಗೀತಕ್ಕೆ ಎಷ್ಟೊಂದು ಶಕ್ತಿಯಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಯಾವುದೇ ನೋವನ್ನು ಮರೆಸುವ ಶಕ್ತಿ ಒಳ್ಳೆಯ ಸಂಗೀತಕ್ಕಿದೆ.

ಇದಕ್ಕಾಗಿಯೇ ಇಂದು ಹಲವೆಡೆ ಎಷ್ಟೋ ದೊಡ್ಡ ದೊಡ್ಡ ರೋಗಗಳನ್ನು ಗುಣಪಡಿಸುವ ಮದ್ದಾಗಿ ಸಂಗೀತ ಮಾರ್ಪಡುತ್ತಿದೆ. ಈ ಮಾತನ್ನು ಬಹುಶಃ ಬಾಲಿವುಡ್ ನಟಿ ಸೋನಾಲಿಬೇಂದ್ರೆ ಕೂಡ ಒಪ್ಪಿದ್ದಾರೆ ಅನಿಸುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವರು ಸದಾ ಸಂಗೀತ ಕೇಳಲು ಹಂಬಲಿಸುತ್ತಾರಂತೆ. ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ಸರೋದ್ ವಾದಕ ಉಸ್ತಾದ್ ಅಲೀ ಖಾನ್ ಅವರ ಸಂಗೀತ ಕಛೇರಿಗೆ ಹಾಜರಾಗಿದ್ದರಂತೆ. ಸೋನಾಲಿ ಸದಾ ತನ್ನ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತನ್ನ ಆರೋಗ್ಯ ಕುರಿತಾಗಿ ಮಾತ್ರವಲ್ಲದೇ, ತನ್ನೆಲ್ಲ ಚಟುವಟಿಕೆಗಳ ಕುರಿತೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರಂತೆ. ಸಂಗೀತ ಕಚೇರಿಗೆ ತೆರಳಿದ್ದನ್ನೂ ಕೂಡ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: