ಸುದ್ದಿ ಸಂಕ್ಷಿಪ್ತ
ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ
“ಭಾರತ ಸಾಂಸ್ಕೃತಿಕ ಐಕ್ಯತೆಗಾಗಿ ಕಾರ್ನಾಟಕ ಸಂಗೀತ” ಶೀರ್ಷಿಕೆ ಜೊತೆ ಮೈಸೂರಿನ ಸುಪ್ರಸಿದ್ಧ ಸಂಗೀತ ಸಂಸ್ಥೆಯಾದ ಬ್ರಹ್ಮವಿದ್ಯಾಯು ಶ್ರೀವೀಣೆ ಟ್ರಸ್ಟ್ ಸಹಭಾಗಿತ್ವದಲ್ಲಿ ಜನವರಿ 2 ಮತ್ತು 3 ರಂದು ಮೈಸೂರಿನ ಕುವೆಂಪುನಗರ, ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀವೀಣೆ ಶೇಷಣ್ಣ ಭವನದ ಸಭಾಂಗಣದಲ್ಲಿ ಸಂಜೆ 5.30ರಿಂದ ಸಂಸ್ಥಾಪಕರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 2 ರಂದು ಜರ್ಮನಿಯ ರಾಜಧಾನಿ ಬರ್ಲಿನ್ ನಗರದಿಂದ ಆಗಮಿಸಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಯೋಗೇಶ್ವರನ್ ಮಾಣಿಕಂ ಅವರ ಗಾಯನ ಕಚೇರಿ ನಡೆಯಲಿದೆ.
ಅದೇ ದಿನ ಪದ್ಮಭೂಷಣ ವೀಣೆ ದೊರೆಸ್ವಾಮಿ ಅಯ್ಯಂಗಾರರ ನೆಚ್ಚಿನ ಶಿಷ್ಯರಾದ ಟಿ.ವಿ. ನರಸಿಂಹನ್ ಅವರ ವೀಣಾ ವಾದನ ಕಾರ್ಯಕ್ರಮವಿದೆ.
ಜ. 3ರಂದು, ಮೈಸೂರಿನ ಸುವಿಖ್ಯಾತ ಯುವವಿದ್ವಾಂಸರಾಗಿರುವ ಕುಮಾರಿ ವೈಷ್ಣವೀ ದತ್ತಾ, ವಾಯ್ಸ್ ಆಫ್ ಬೆಂಗಳೂರು ಖ್ಯಾತಿಯ ಶ್ರೀಹರ್ಷ ಮತ್ತು ಶಂಕರಾಟೀವಿ ಇತ್ಯಾದಿಗಳಲ್ಲಿ ತನ್ನ ಸಂಗೀತ ಪ್ರಸ್ತುತಿಯಿಂದ ಖ್ಯಾತರಾಗಿರುವ ಶ್ರೀ ರಂಘುನಂದನ್ ಅವರು ತಮ್ಮ ಗಾಯನ ಸಂಗೀತ ಕಚೇರಿಗಳನ್ನು ನೀಡಲಿದ್ದಾರೆ.