ಪ್ರಮುಖ ಸುದ್ದಿ

ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಗೆ ತೆರಳಿದ ಪ್ರಧಾನಿ ಮೋದಿ

ದೇಶ(ನವದೆಹಲಿ)ಅ.27:- ಪ್ರಧಾನಿ ನರೇಂದ್ರ ಮೋದಿಯವರು  ಅಲ್ಲಿನ ಪ್ರಧಾನಿ ಶಿಂಜೋ ಅಬೆಯವರ ಜೊತೆ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಗೆ ತೆರಳಿದ್ದಾರೆ.

ಅ.28-29ರಂದು ಎರಡುದಿನಗಳ ಕಾಲ ಶೃಂಗಸಭೆ ನಡೆಯಲಿದೆ. ಜಪಾನ್ ಗೆ ತರಳುವ ಮೊದಲು ಇದು ವಿಜಯದ ಸಂಯೋಜನೆಯಾಗಿದ್ದು, ದ್ವೀಪದ ರಾಷ್ಟ್ರವು ಆರ್ಥಿಕ ಮತ್ತು ತಾಂತ್ರಿಕ ಆಧುನೀಕರಣಕ್ಕೆ ಭಾರತದ ಅತ್ಯಂತ ಮೌಲ್ಯಯುತ ಪಾಲುದಾರ ಎಂದಿದ್ದಾರೆ. ಜಪಾನ್ ಜೊತೆ ವಿಶೆಷ ಕಾರ್ಯತಂತ್ರ ಮತ್ತು ಜಾಗತಿಕ ಮೈತ್ರಿಯನ್ನು ಹೊಂದಿದ್ದೇವೆ. ಜಪಾನ್ ನೊಂದಿಗಿನ ನಮ್ಮ ಆರ್ಥಿಕ ಕಾರ್ಯತಂತ್ರದ ಸಹಕಾರ ಇತ್ತೀಚಿನ  ವರ್ಷಗಳಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಭಾರತ ಮತ್ತು ಜಪಾನ್ ನಡುವಿನ ಸಹಕಾರವು ಭಾರತದ ಈಸ್ಟ್ ನೀತಿಯಪ್ರಬಲ ಸ್ತಂಭಗಳ ಮೇಲೆ ಆಧಾರಿತವಾಗಿದೆ.ಮುಕ್ತ ಮತ್ತು ಅಂತರ್ಗತ ಭಾರತೀಯ ಪೆಸಿಫಿಕ್ ವಲಯಕ್ಕೆ ಬದ್ಧತೆಯನ್ನು ಹಂಚಿಕೊಂಡಿದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: