ಸುದ್ದಿ ಸಂಕ್ಷಿಪ್ತ
‘ಐ ಡ್ರೀಮ್ ಪ್ರಿವಿಲೇಜ್ ಡಿಸ್ಕೌಂಟ್ ಕಾರ್ಡ್’ ಉದ್ಘಾಟನೆ ನಾಳೆ
ಮೈಸೂರು,ಅ.27 : ಫ್ಯೂಚರ್ ಫೌಂಡೇಷನ್ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಐ ಡ್ರೀಮ್ ಪ್ರಿವಿಲೇಜ್ ಡಿಸ್ಕೌಂಟ್ ಕಾರ್ಡ್’ ಬಿಡುಗಡೆ ಕಾರ್ಯಕ್ರಮವನ್ನು ಅ.28ರ ಬೆಳಗ್ಗೆ 11 ಗಂಟೆಗೆ ಜೆಪಿ ಪ್ಯಾಲೇಸ್ ನಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಶಾಸಕ ತನ್ವೀರ್ ಸೇಠ್, ಮಾಜಿ ಸಚಿವ ವಿಜಯಶಂಕರ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)