ಸುದ್ದಿ ಸಂಕ್ಷಿಪ್ತ

“ಸುಗ್ಗಿ ಸಂಭ್ರಮದಲಿ.. ಇಷ್ಟ ರಂಗೋಲಿ ವೈಭವ”

ಮನ್ವಂತರ ಸಮೂಹ ಬಳಗದ ವತಿಯಿಂದ ಜನವರಿ 1, ಭಾನುವಾರ ಬೆಳಗ್ಗೆ 10 ಗಂಟೆಗೆ ಕೃಷ್ಣಮೂರ್ತಿಪುರಂನಲ್ಲಿರುವ ಭಗೀನಿ ಸೇವಾ ಸಮಾಜದ ಆವರಣದಲ್ಲಿ “ಶ್ರೀಮತಿ ಉಷಾ ಕೆ.ಆರ್. ಶ್ರೀ ಹರಿ ಅವರ ನೆನಪಿನಲ್ಲಿ ಇಷ್ಟ ರಂಗೋಲಿ ವೈಭವ” ಎಂಬ ರಂಗೋಲಿ ಚಿತ್ತಾರ ಹಾಗೂ 2017ರ ಹೊಸ ವರ್ಷದ ದಿನ ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಮೇಲುಕೋಟೆ ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ವಹಿಸಲಿದ್ದಾರೆ.

ರಂಗೋಲಿ ಕಲಾವಿದರು, ರಂಗೋಲಿ ಪ್ರೇಮಿಗಳು, ಚಿತ್ರಕಾರರು, ಸಾರ್ವಜನಿಕರು ತಮ್ಮಿಷ್ಟದ ರಂಗೋಲಿ ಬಿಡಿಸಬಹುದು. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಮನ್ವಂತರ ಸಮೂಹ ಬಳಗದ ಗೌರವ ಕಾರ್ಯದರ್ಶಿ ಜಿ.ಎಸ್.ಸುನೀಲ್ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 9538522053 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: