ಪ್ರಮುಖ ಸುದ್ದಿ

ಬಿ. ವಿ. ಕೆ.ವಿ. ಗೆ ವಿದ್ಯಾಹರೀಶ್ ಸಿಇಓ

ರಾಜ್ಯ(ಮಡಿಕೇರಿ) ಅ.29: – ಭಾರತೀಯ  ವಿದ್ಯಾಭವನ ಕೊಡಗು ವಿದ್ಯಾಲಯಕ್ಕೆ  ವಿದ್ಯಾ ಹರೀಶ್  ಅವರನ್ನು ಸಿ.ಇ.ಒ ಆಗಿ ನೇಮಿಸಲಾಗಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿರುವ  ವಿದ್ಯಾಹರೀಶ್, ಹಲವು  ಹೆಸರಾಂತ ಶಾಲೆಗಳಲ್ಲಿ ಸಲಹೆಗಾರರಾಗಿ ಕರ್ತವ್ಯ  ನಿರ್ವಹಿಸಿದ್ದಾರೆ.     ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ವಿದ್ಯಾಹರೀಶ್ ನೀಡುತ್ತಿದ್ದಾರೆ.  ಮಕ್ಕಳಲ್ಲಿ ಕಲಿಯುವ ಕಲೆ ಹಾಗೂ ಕಲಿತುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿಯನ್ನು ವೃದ್ಧಿ ಮಾಡುವುದಕ್ಕೆ ಒತ್ತು ನೀಡಲಿದ್ದಾರೆ.    ಸರ್ವಾಂಗೀಣ  ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ಬೋಧನೆಯ ಮೂಲಕ ನೀಡುವ ಕೌಶಲ್ಯದಲ್ಲಿ ವಿದ್ಯಾಹರೀಶ್ ಪರಿಣತರಾಗಿದ್ದಾರೆ ಎಂದು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ  ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ.ಸುಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: