ಮೈಸೂರು

ಮೃಗಾಲಯದಿಂದ ಕಾಲೇಜು-ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಮೈಸೂರು,ಅ.29:- ಮೈಸೂರು ಮೃಗಾಲಯವು ನ.10ರಂದು ಬೆಳಿಗ್ಗೆ 11ರಿಂದ 12ಗಂಟೆಯವರೆಗೆ  ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಸಿಸಿದೆ.

ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಷಯ ‘ಮೃಗಾಲಯಗಳು ಮನರಂಜನೆಯ ತಾಣದಿಂದ ಶೈಕ್ಷಣಿಕ ಕೇಂದ್ರವಾಗಿ ಪರಿವರ್ತಿತವಾಗಿದೆ’. ಕಾಲೇಜು ವಿದ್ಯಾರ್ಥಿಗಳ ವಿಷಯ ‘ನಗರದ ಸರೋವರಗಳು ಮತ್ತು ಅವುಗಳ ಪ್ರಾಮುಖ್ಯತೆ’ ಕುರಿತಾಗಿ ಇದ್ದು, ಭಾಗವಹಿಸಲಿಚ್ಛಿಸುವವರು ಅವರವರ ಶಿಕ್ಷಣ ಸಂಸ್ಥೆಯಿಂದ ಕಡ್ಡಾಯವಾಗಿ, ನೇರವಾಗಿ ಅಥವಾ ವೈಯುಕ್ತಿಕವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಮ್ಮ ಸಂಸ್ಥೆಯಿಂದ ಅನುಮತಿ ಪತ್ರ ತರದಿದ್ದಲ್ಲಿ ಆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹ ನಿರ್ದೇಶಕರು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: