ಸುದ್ದಿ ಸಂಕ್ಷಿಪ್ತ

ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ; ವಿವಿಧ ಸರ್ಟಿಫಿಕೇಟ್‍ ಕೋರ್ಸ್‍ಗಳು ಲಭ್ಯ

2017 ರಲ್ಲಿ ಯುಪಿಎಸ್‍ಸಿ ಅವರು ಜೂನ್‍ ನಡೆಸಲಿರುವ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳಿಗಾಗಿ (ಐಎಎಸ್/ಐಪಿಎಸ್/ಐಆರ್‍ಎಸ್‍) ನಡೆಸುವ ಪೂರ್ವಭಾವಿ ಪರೀಕ್ಷೆಗೆ ತರಬೇತಿಯನ್ನು ಕೃಷಿಕ್ ಸರ್ವೋದಯ ಫೌಂಡೇಷನ್‍ ವತಿಯಿಂದ ವಿಜಯನಗರ 2ನೇ ಹಂತ, ಜನರಲ್ ಕೆ.ಎಸ್.ತಿಮ್ಮಯ್ಯ ರಸ್ತೆಯಲ್ಲಿರುವ ‘ಕೃಷಿಕ್ ಭವನ’ದಲ್ಲಿ ಪ್ರಾರಂಭಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ತಿಗಳು ಡಿಸೆಂಬರ್ 31ರ ಒಳಗಾಗಿ ಪ್ರವೇಶಕ್ಕಾಗಿ ನೋಂದಣಿ ಮಾಡಬಹುದು.

ಇದೇ ಸಂಸ್ಥೆಯ ವತಿಯಿಂದ 10ನೇ ತರಗತಿಯವರೆಗೆ ಅಧ್ಯಯನ ಮಾಡಿರುವ ಆಸಕ್ತ ಅಭ್ಯರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮತ್ತು ಪದವೀಧರ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಸರ್ಟಿಫಿಕೇಟ್‍ ಕೋರ್ಸ್‍ಗಳನ್ನು ಪ್ರಾರಂಭಿಸಲಾವುದು.

ಆಸಕ್ತರು ಜನವರಿ 10ರ ಒಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಡಾ.ಜಿ.ಗೋವಿಂದರಾಜು ಅವರನ್ನು ಸಂಪರ್ಕಿಸಬಹುದು. ದೂ.ಸಂಖ್ಯೆ: 0821-2301564/9945752592/9611605678. ಇ-ಮೇಲ್: [email protected]. ವಸತಿ ಅಗತ್ಯವಿದ್ದವರಿಗೆ ಹಾಸ್ಟೆಲ್ ವ್ಯವಸ್ಥೆ ಇದೆ.

Leave a Reply

comments

Related Articles

error: