ಸುದ್ದಿ ಸಂಕ್ಷಿಪ್ತ

ಎಚ್‍.ಸಿ.ಮಹದೇವಪ್ಪರನ್ನು ಲಿಂಗಾಯಿತರು ನಂಬಲ್ಲ: ಆಲನಹಳ್ಳಿ ಪುಟ್ಟಸ್ವಾಮಿ

ನಂಜನಗೂಡಿನಲ್ಲಿ ನಡೆದ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‍.ಸಿ. ಮಹದೇವಪ್ಪ ಅವರು ಮೈಸೂರು ಭಾಗದ ಪ್ರಭಾವಿ ಲಿಂಗಾಯಿತ ಮುಖಂಡರಾಗಿದ್ದ ದಿವಂಗತ ಎಂ.ಮಹದೇವು ಅವರನ್ನು ಹಾಡಿ ಹೊಗಲಿದ್ದಾರೆ. ಉಪಚುನಾವಣೆ ಹಿನ್ನಲೆಯಲ್ಲಿ ಮಹದೇವಪ್ಪ ಅವರು ಇಂತಹ ಮಾತುಗಳನ್ನಾಡಿದ್ದು, ಲಿಂಗಾಯತ ಸಮುದಾಯ ಅವರ ಮಾತುಗಳನ್ನು ನಂಬುವುದಿಲ್ಲ ಎಂದು ಬಿಜೆಪಿ ಮುಖಂಡ ಆಲನಹಳ್ಳಿ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಂದನ್ನು ಬಿಡುಗಡೆ ಮಾಡಿರುವ ಅವರು, ಇದೇ ಎಚ್‍.ಸಿ. ಮಹದೇವಪ್ಪ ಅವರು ಹಾಗೂ ಸಿ.ಎಂ. ಸಿದ್ದರಾಮಯ್ಯನವರು ಎಂ.ಮಹದೇವು ಅವರು ಬದುಕಿದ್ದಾಗ ಸಾರ್ವಜನಿಕವಾಗಿ ಅವರಿಗೆ ಮಾಡಿದ ಅವಮಾನ ಎಂಥದ್ದು ಎಂಬುದು ತಿಳಿದಿದೆ. ಲಿಂಗಾಯತ ಸಮಾಜ ಇದನ್ನು ಯಾವುದೇ ಕಾರಣದಿಂದಲೂ ಮರೆತಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಆಡಿರುವ ಮಾತುಗಳನ್ನು ಸಮುದಾಯ ಅರ್ಧಮಾಡಿಕೊಳ್ಳಬಲ್ಲದು ಎಂದಿದ್ದಾರೆ.

Leave a Reply

comments

Related Articles

error: