ಮೈಸೂರು

ಆಗಸ್ಟ್ 29ರಂದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಅಖಿಲ ಭಾರತ ಟ್ರೇಡ್ ಯೂನಿಯನ್ ಮುಖಂಡರಾದ ದಿ| ಕಾಂ.ಕೆ. ವೆಂಕಟರಾಮಯ್ಯ ಹಾಗೂ ದಿ| ಕಾಂ.ಕೆ. ಗುರುಪ್ರಕಾಶ್ ರವರ ಸ್ಮರಣಾರ್ಥ ಉಚಿತ ಕಣ್ಣಿನ ಪೊರೆ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಶಿಬಿರವು ಇದೇ ಆಗಸ್ಟ್ 29ರ ಸೋಮವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಮೇಟಗಳ್ಳಿ ಅಣ್ಣಯ್ಯಪ್ಪ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ತಜ್ಞ ವೈದ್ಯರುಗಳಿಂದ ಕಣ್ಣಿನ ಪರೀಕ್ಷೆ ಹಾಗೂ ಅಂದೇ ನಗರದ  ಎಂ.ಆರ್.ಸಿ. ಕಣ್ಣಿನ  ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುವುದು. ಶಿಬಿರವನ್ನು ಕಾರ್ಮಿಕ ಕಲ್ಯಾಣ ಮಂಡಳಿ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಮೈಸೂರು ಪಾಲಿಮರ್ಸ್ ಕಾರ್ಮಿಕ ಸಂಘಟನೆ, ಭಾರತೀಯ ಜನಕಲಾ ಸಮಿತಿ ಮತ್ತು ಮೈಸೂರು ರೇಸ್ ಕ್ಲಬ್ನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಶೇಷ ಸೂಚನೆ: ಶಸ್ತ್ರ ಚಿಕಿತ್ಸೆಗೆ ಒಳಗಾದವರು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕು. ರೋಗಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆ ಇದೆ. ಸಹಾಯಕರನ್ನು ಕರೆತರುವ ಅವಶ್ಯ ಇಲ್ಲ, ಚಿಕಿತ್ಸೆಗೆ ಬರುವಾಗ ಸ್ನಾನ ಮಾಡಿ ಶುಭ್ರರಾಗಿ ಬರುವುದು, ಈಗಾಗಲೇ ತೆಗೆದುಕೊಳ್ಳುವ ಔಷಧಿ ವಿವರಗಳನ್ನು ಕಡ್ಡಾಯವಾಗಿದೆ ತರಬೇಕು. ಹೆಚ್ಚಿನ ಮಾಹಿತಿಗಾಗಿ ಕೆ.ಎಸ್. ರೇವಣ್ಣ: 9448061771, ಎಸ್. ಶ್ರೀಧರ್: 9972023060 ಹಾಗೂ ಎಂ.ಜಿ.ಪ್ರಸಾದ್: 9844761376 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಎ.ಐ.ಟಿ.ಯು.ಸಿ ನ ಕಾರ್ಯದರ್ಶಿ, ಹೆಚ್.ಬಿ. ರಾಮಕೃಷ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

comments

Related Articles

error: