ಕರ್ನಾಟಕಪ್ರಮುಖ ಸುದ್ದಿ

ದಿನೇಶ್ ಗುಂಡೂರಾವ್ ನಾಲಿಗೆ ಹದ್ದುಬಸ್ತಿನಲ್ಲಿಟ್ಟುಕೊಳ್ಳಲಿ: ಬಿಎಸ್‍ವೈ ಕಿಡಿ

ಬೆಂಗಳೂರು (ಅ.29): “ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದರೆ ಯಡಿಯೂರಪ್ಪ ಓಡಿಹೋಗಿ ದೇವೇಗೌಡರ ತೊಡೆಯ ಮೇಲೆ ಕೂರುತ್ತಾರೆ” ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ಒಬ್ಬ ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಮರೆತು ಹಲವು ದಿನಗಳವಾಗಿವೆ. ಇತ್ತೀಚೆಗೆ ತಲೆತಿರುಕನಂತೆ ಮಾತನಾಡುತ್ತಿದ್ದಾರೆ. ಅಂಥವರ ಬಗ್ಗೆ ಮಾತನಾಡಿರುವುದೇ ಒಳಿತು” ಎಂದು ಕಿಡಿಕಾರಿದ ಯಡಿಯೂರಪ್ಪ, “ನಾನೇಕೆ ಜೆಡಿಎಸ್ ಜೊತೆ ಸಂಬಂಧ ಬೆಳೆಸಲಿ. ನನ್ನ ಬೆಂಬಲ ಪಡೆದುಕೊಂಡು ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದರು. ಅಪ್ಪ-ಮಕ್ಕಳು ಸೇರಿಕೊಂಡು ನನಗೆ ಟೋಪಿ ಹಾಕಿರುವಾಗ ಮತ್ತೆ ಅವರ ಜೊತೆ ಸಂಬಂಧ ಬೆಳೆಸಲು ಸಾಧ್ಯವೇ” ಎಂದು ಪ್ರಶ್ನಿಸಿದರು.

“ಈ ಜನ್ಮದಲ್ಲಿ ಜೆಡಿಎಸ್ ಜೊತೆ ಸಂಬಂಧ ಬೆಳೆಸುವುದಿಲ್ಲ. ಎಂತಹ ಸಂದರ್ಭ ಬಂದರೂ ಅಪ್ಪ-ಮಕ್ಕಳ ಜೊತೆ ಕೈ ಜೋಡಿಸುವುದಿಲ್ಲ. ದಿನೇಶ್ ಗುಂಡೂರಾವ್ ಮುಂದಿನ ದಿನಗಳಲ್ಲಾದರೂ ಜವಾಬ್ದಾರಿಯುತವಾಗಿ ಮಾತನಾಡಲಿ. ಒಬ್ಬರ ಬಗ್ಗೆ ಟೀಕೆ ಮಾಡುವಾಗ ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಅಡ್ಡಾದಿಡ್ಡಿ ಮಾತನಾಡಿದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಎಚ್ಚರಿಸಿದರು. (ಎನ್.ಬಿ)

Leave a Reply

comments

Related Articles

error: