ಕರ್ನಾಟಕಪ್ರಮುಖ ಸುದ್ದಿ

ಜೆಡಿಎಸ್ ಶನಿ ಇದ್ದಂತೆ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲವೆಂದ ಈಶ್ವರಪ್ಪ!

ಬಾಗಲಕೋಟೆ (ಅ.29): ಬೀಫ್ ತಿನ್ನುವ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ನಗರದಲ್ಲಿ ಪ್ರತಿಕ್ರಯಿಸಿರುವ ಕೆ. ಎಸ್. ಈಶ್ವರಪ್ಪ, ಸಿದ್ದರಾಮಯ್ಯ ದನದ ಮಾಂಸ ತಿಂತಾರೊ, ಎಮ್ಮೆ ಮಾಂಸ ತಿಂತಾರೋ ಅವರಿಗೆ ಬಿಟ್ಟಿದ್ದು. ಆದರೆ ಮನುಷ್ಯರು ತಿನ್ನೋದನ್ನು ತಿನ್ನಲಿ ಅಂತ ಹೇಳ್ತಿನಿ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ದೇವೆಗೌಡರ ಬೆನ್ನಿಗೆ ಚಾಕು ಹಿಡಿದು ನಿಂತಿದ್ದಾರೆ. ಸಿದ್ದರಾಮಯ್ಯ ಬೆನ್ನಿಗೆ ಕುಮಾರಸ್ವಾಮಿ ಚಾಕು ಹಿಡಿದು ನಿಂತಿದ್ದಾರೆ. ಯಾವಾಗ ಇವರು ಸಾಯುತ್ತಾರೊ ಗೊತ್ತಿಲ್ಲ. ಕಾಂಗ್ರೆಸ್- ಜೆಡಿಎಸ್ ನವರು ಈಜು ಬಾರದವರು. ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಮುಳುಗಿ ಹೋಗುತ್ತಾರೆ. ಇದಕ್ಕೆ ಟೆಸ್ಟ್ ಡೋಜ್ ಜಮಖಂಡಿ ಉಪಚುನಾವಣೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೊಬ್ಬರಿಗೆ ಆಗೋದಿಲ್ಲ. ಸಿದ್ದರಾಮಯ್ಯನವರ ರಾಹು ಕೇತು ಶನಿ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಈಶ್ವರಪ್ಪ ಸಿದ್ದರಾಮಯ್ಯಗೆ ಜಿ. ಪರಮೇಶ್ವರ ರಾಹು, ದೇವೇಗೌಡ ಶನಿ, ರೇವಣ್ಣ ಕೇತು ಎಂದು ವ್ಯಂಗ್ಯವಾಡಿದರು. ಜನತಾದಳ ಶನಿ ಇದ್ದ ಹಾಗೆ. ಆ ಶನಿಗಳನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಹೊರಟಿದ್ದಾರೆ. ರೇವಣ್ಣ ರಾವಣ ಅಲ್ಲಲ್ಲ ರೇವಣ್ಣ ಎಂದು ಈಶ್ವರಪ್ಪ ಅಣಕವಾಡಿದರು.

ಮೈಸೂರಿನಿಂದ ಓಡಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಓಡಿಸಿದ್ದು ಯಾರು ಎಂದು ಅವರೇ ತಿಳಿಸಲಿ. ಸಿದ್ದರಾಮಯ್ಯ ಜಾತಿ-ಧರ್ಮ ಒಡೆದರು. ಸಾಲದೆಂಬಂತೆ ಯಡಿಯೂರಪ್ಪ ಅವರು ಸಿಎಂ ಆಗುತ್ತಾರೆಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕೆ ಮಾಡುತ್ತಾರೆ. ಆದರೆ ನಿಜವಾಗಿ ಹಗಲು ಕನಸು ಕಾಣುತ್ತಿರುವುದು ಸಿದ್ದರಾಮಯ್ಯನವರು ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಶೋಭಾಗೆ ಸಿದ್ದರಾಮಯ್ಯ ಅವಳು ಅಂತಾರೆ. ನನಗೆ ಸಿದ್ದರಾಮಯ್ಯ ಸವರ ಪತ್ನಿ ತಾಯಿ ಸಮಾನ. ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕಾಲ ಕಸ ಎಂದರು ಕಾಂಗ್ರೆಸ್ ನವರು ಎಂದು ಈಶ್ವರಪ್ಪ ಆರೋಪಿಸಿದರು.

ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹಗಲು, ರಾತ್ರಿ ಕನಸು ಕಾಣುತ್ತಿದ್ದಾರೆ. ಬ್ರಹ್ಮ ಬಂದರೂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದಿಲ್ಲ. ಚಾಮುಂಡೇಶ್ವರಿ ಜನ ಸೋಲಿಸಿ ಇವರನ್ನು ಕಿತ್ತು ಬಿಸಾಕಿದ್ದಾರೆ ಎಂದು ಈಶ್ವರಪ್ಪ ಹೇಳಿದರು. (ಎನ್.ಬಿ)

Leave a Reply

comments

Related Articles

error: