ಪ್ರಮುಖ ಸುದ್ದಿ

ಡ್ರಿಲ್ಲಿಂಗ್ ವೇಳೆ ಅನಿಲ ಸೋರಿಕೆ : ಆತಂಕದ ವಾತಾವರಣ ನಿರ್ಮಾಣ

ರಾಜ್ಯ(ಬೆಂಗಳೂರು),ಅ.29:-ಮೆಟ್ರೋ ಕಾಮಗಾರಿಯ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಲೈನ್‌ನಲ್ಲಿ ಅನಿಲ ಸೋರಿಕೆಯಾಗಿ ಕೆಲ ಕಾಲ ಆಂತಕದ ವಾತಾವರಣ ನಿರ್ಮಾಣವಾಗಿದ್ದ ಘಟನೆ ಮಹದೇವಪುರದ ಗರುಡಾಚಾರ್ ಪಾಳ್ಯದಲ್ಲಿ ಇಂದು ನಸುಕಿನಲ್ಲಿ ನಡೆದಿದೆ.

ಗರುಡಾಚಾರ್ ಪಾಳ್ಯದ ಬಳಿ ಮುಂಜಾನೆ ೩ರ ವೇಳೆ ಮೆಟ್ರೋ ಕಾಮಗಾರಿಗೆ ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದ70 ಕಿ ಲೋ ಪೋರ್ಸ್‌ನ ಗ್ಯಾಸ್ ಪೈಪ್ ಲೈನ್ ಸೋರಿಕೆಯಾಗಿ ಕೆಲ ಕಾಲ ಅತಂಕದ ವಾತಾವರಣ ನಿರ್ಮಾಣವಾಗಿತ್ತು.

ಸೋರಿಕೆಯಿಂದ ಐಟಿಪಿಎಲ್ ಪ್ರಮುಖ ರಸ್ತೆಯಲ್ಲಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಸೋರಿಕೆ ನಿಲ್ಲಿಸಲು ಹರಸಾಹಸ ಪಡಬೇಕಾಯಿತು ನಂತರ ಕೆಲ ಗಂಟೆಗಳ ಬಳಿಕ ಗ್ಯಾಸ್ ಪೈಪ್ ಲಿಕೇಜ್‌ನ್ನು ನಿಲ್ಲಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: