ಸುದ್ದಿ ಸಂಕ್ಷಿಪ್ತ
ಜೆಎಸ್ಎಸ್ ಮಹಿಳಾ ಕಾಲೇಜು ಪದವೀಧರರ ದಿನ; ಜ.2ರಂದು
ಮೈಸೂರಿನ ಸರಸ್ವತಿಪುರದಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ 9ನೇ ಪದವೀಧರರ ದಿನಾಚರಣೆ ಕಾರ್ಯಕ್ರಮವನ್ನು ಜನವರಿ 2, ಸೋಮವಾರದಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ಕಾಲೇಜಿನ ನವಜ್ಯೋತಿ ಸಭಾಂಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬಾಂಬೆ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಡಾ.ಮಂಜುಳ ಚೆಲ್ಲೂರ್, ಜೆಎಸ್ಎಸ್ ಮಹಾವಿದ್ಯಾಪೀಠದ ಸಿಇಓ ಡಾ.ಸಿ.ಜಿ.ಬೆಟಸೂರಮಠ ಅವರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ 0821-2548239 ಸಂಪರ್ಕಿಸಬಹುದು.