ಕರ್ನಾಟಕಪ್ರಮುಖ ಸುದ್ದಿ

ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧ

ಹಾಸನ (ಅ.30): ಅರಕಲಗೂಡು ತಾಲ್ಲೂಕಿನ ರಾಮನಾಥಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ತಾಲ್ಲೂಕಿ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲ್ಲಿರುವ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ತಕ್ಷಣದಿಂದ ಜಾರಿಗೆ ಬರುವಂತೆ ನ.1ರ ಬೆಳಗ್ಗೆ 6 ವರೆಗೆ ಮದ್ಯ ಮಾರಾಟ ಹಾಗೂ ಸಾಗಾಟವನ್ನು ಜಿಲ್ಲಾಧಿಕಾರಿಯವರು ನಿಷೇಧಿಸಿ ಆದೇಶಿಸಿದ್ದಾರೆ.

ಅರಕಲಗೂಡು ತಾಲ್ಲೂಕು ರಾಮನಾಥಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಬಗೆಯ ಅಮಲು ಪಾನಿಯ ಹಾಗೂ ಮದ್ಯ ಶೇಖರಣೆ, ಮದ್ಯ ಸರಬರಾಜು ಮಾಡುವಂತಹ ಎಲ್ಲಾ ಬಗೆಯ ಸ್ಟಾರ್ ಹೋಟೆಲ್‍ಗಳು, ಡಾಬಾಗಳು, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಮದ್ಯ ಸರಬರಾಜು ಮಾಡುವುದನ್ನು ಸಹ ಸಂಪೂರ್ಣವಾಗಿ ನಿಶೇಧಿಸಿ ಆದೇಶಿದೆ ಹಾಗೂ ಮದ್ಯ ಮಾರಾಟ ನಿಷೇಧಿತ ಪ್ರದೇಶಗಳಲ್ಲಿರುವ ಎಲ್ಲಾ ಮದ್ದದ ಅಂಗಡಿಗಳನ್ನು ಮತ್ತು ಮದ್ಯ ತಯಾರಕಾ ಘಟಕಗಳನ್ನು ಮುಚ್ಚಿಸಿ ಮೊಹರು ಮಾಡಿ ಅದರ ಕೀಯನ್ನು ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳಿಗೆ ಒಪ್ಪಿಸಬೇಕಾಗಿ ಅಬಕಾರಿ ಇಲಾಖೆ ಅಬಕಾರಿ ಉಪ ಆಯುಕ್ತರು ರವರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದ್ದಾರೆ. (ಎನ್.ಬಿ)

Leave a Reply

comments

Related Articles

error: