ಮೈಸೂರು

ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.30:- ರಾಜ್ಯದಲ್ಲಿರುವ ಎಲ್ಲಾ ಅಂಗಡಿ ಹೋಟೆಲ್ ಹಾಗೂ ಕಂಪನಿಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ಆದೇಶ ಹೊರಡಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಸೇನಾಪಡೆ ಪ್ರತಿಭಟನೆ ನಡೆಸಿತು.

ನ್ಯಾಯಾಲಯ ಗಾಂಧಿ ಪ್ರತಿಮೆ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕದಲ್ಲಿ ಎಲ್ಲಿ ನೋಡಿದರೂ ನಾಮಫಲಕದಲ್ಲಿ ಬರೀ ಅನ್ಯ ಭಾಷೆಗಳಿವೆ. ನಮ್ಮ ಹೋರಾಟ ಏನೆಂದರೆ ಕರ್ನಾಟಕದಲ್ಲಿ ಸಂಪೂರ್ಣವಾಗಿ ಶೇ.60 ಭಾಗ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಅಂತ ಆದೇಶ ಇದೆ. ಈ ಸರ್ಕಾರದ ನಿಯಮವನ್ನು ಜಿಲ್ಲಾಡಳಿತಗಳು ಹಾಗೂ ನಗರಪಾಲಿಕೆಗಳು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಗರ ಪಾಲಿಕೆಗಳ ಆರೋಗ್ಯ ವಿಭಾಗದಿಂದ ವಾಣಿಜ್ಯ ಪರವಾನಗಿ ನೀಡುವಾಗ ಅಂಗಡಿ ಹೋಟೆಲ್ ಮತ್ತು ಕಂಪನಿಗಳು ತಮ್ಮ ಅಂಗಡಿಗಳ ಮುಂದೆ ಅಳವಡಿಸುವ ಮತ್ತು ಅಳವಡಿಸಿರುವ ನಾಮಫಲಕಗಳಲ್ಲಿ ನಮ್ಮ ಕನ್ನಡ ಭಾಷೆಯನ್ನು ಪ್ರಧಾನವಾಗಿ ಅಂದರೆ ಶೇ.50ಕ್ಕಿಂತ ಹೆಚ್ಚಾಗಿ ಇರುವಂತೆ  ನಗರಪಾಲಿಕೆಗಳು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ವಾಣಿಜ್ಯ ಸಂಸ್ಥೆಗಳ ಪರವಾನಗಿ ರದ್ದುಪಡಿಸುತ್ತೇವೆ ಎಂಬ ಸುತ್ತೋಲೆಯನ್ನು ರಾಜ್ಯ ಸರ್ಕಾರ ಶೀಘ್ರ ಹೊರಡಿಸಬೇಕು ಎಮದರು. ಮುಂದಿನದಿನಗಳಲ್ಲಿ ಬೃಹತ್ ಕನ್ನಡ ನಾಮಫಲಕ ಅಭಿಯಾನವನ್ನು ಹಮ್ಮಿಕೊಂಡಿದ್ದು ಸರ್ಕಾರ, ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಗಳು, ಸಹಕಾರ ನೀಡಿಬೇಕಿದೆ. ಕನ್ನಡದಲ್ಲಿ ನಾಮಫಲಕವಿದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ  ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಗರಾಧ್ಯಕ್ಷ ಪ್ರಜೀಶ್ ಪಿ, ಶಾಂತಮೂರ್ತಿ ಆರ್, ಸಿ.ಎಸ್.ನಂಜುಂಡಸ್ವಾಮಿ, ಶಾಂತರಾಜೇ ಅರಸ್, ಜಗದೀಶ್, ಪ್ರಭುಶಂಕರ್, ರವಿತೇಜ, ವಿಜಯೇಂದ್ರ, ಅಕ್ಷಯ್, ದರ್ಶನ್ ಗೌಡ, ವಿನೋದ್, ಪರಿಸರ ಚಂದ್ರು, ನಂದಕುಮಾರ್, ಹರೀಶ್, ಅಂಕಿತ್, ಗುರುಮಲ್ಲಪ್ಪ, ಮತ್ತಿತರರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: