
ದೇಶ
ನಕ್ಸಲರ ಗುಂಡಿಗೆ ಇಬ್ಬರು ಪೊಲೀಸರು, ದೂರದರ್ಶನದ ಕ್ಯಾಮರಾಮನ್ ಸಾವು
ನವದೆಹಲಿ,ಅ.30-ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮರಾಮನ್ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ದಾಂತೇವಾಡಾ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟಿರುವ ಕ್ಯಾಮರಾಮನ್ ಬಗ್ಗೆ ಇನ್ನು ವಿವರ ಲಭ್ಯವಾಗಿಲ್ಲ. ಎರಡು ದಿನಗಳ ಹಿಂದೆ ನಕ್ಸಲರು ಚುನಾವಣೆಗೆ ಸಜ್ಜಾಗಿರುವ ಬಿಜಾಪುರ್ ಜಿಲ್ಲೆಯಲ್ಲಿ ಬುಲೆಟ್ ಪ್ರೂಫ್ ಬಂಕರ್ ವಾಹನವನ್ನು ಸ್ಫೋಟಿಸಿದ್ದರು. ಈ ಘಟನೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್)ನಾಲ್ವರು ಸಾವನ್ನಪ್ಪಿದ್ದರು. ಇಬ್ಬರು ಗಾಯಗೊಂಡಿದ್ದರು.
ನೆರೆಯ ಸುಕ್ಮಾ ಜಿಲ್ಲೆಯಲ್ಲಿ ನ.12 ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಆಡಳಿತಾರೂಢ ಬಿಜೆಪಿಯ ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿ ರಮಣ್ ಸಿಂಗ್ ಚಾಲನೆ ನೀಡುವ ದಿನವೇ ನಕ್ಸಲ್ ದಾಳಿ ನಡೆದಿತ್ತು. (ಎಂ.ಎನ್)