ಕರ್ನಾಟಕ

ಸಮ್ಮಿಶ್ರ ಸರಕಾರ ಬೀಳಿಸುವ ಕನಸು ನನಸಾಗುವುದಿಲ್ಲ: ಸಿಎಂ ಕುಮಾರಸ್ವಾಮಿ

ಕುಂದಾಪುರ (ಅ.30): ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಬೀಳಿಸುವ ಬಿಜೆಪಿ ನಾಯಕರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಮುಖ್ಯ‌ಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಬೈಂದೂರು ವಿಧಾನಸಭಾ ವ್ಯಾಪ್ತಿಯ ತ್ರಾ‌ಸಿಯಲ್ಲಿನ ಕೊಂಕಣ ಖಾರ್ವಿ ಸಮುದಾಯ ಭವನದಲ್ಲಿ ಇಂದು ನಡೆದ ಮಧು ಬಂಗಾರಪ್ಪ ಪರ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು. ಈ ವೇಳೆ, “ಕರಾವಳಿ ಜನ ಹಿಂದುತ್ವ ಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ, ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ” ಎಂದರು.

ಬಿಜೆಪಿ ಭಾವನಾತ್ಮಕ ವಿಚಾರ ಜನರ ಮುಂದಿಡುತ್ತಾ ಚುನಾವಣೆ ನಡೆಸುತ್ತದೆ. ಬಿಜೆಪಿ ನಾಯಕರು ಸರಕಾರ ಬೀಳುವ ಕನಸಲ್ಲಿದ್ದಾರೆ. ನಮಗೆ ದೈವ ಪ್ರೇರೇಪಣೆ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿರಬೇಕಂತ ದೇವರು ತೀರ್ಮಾನಿಸ್ತಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಉಪಚುನಾವಣೆ ನಂತರ ನಾನು ಮನೆಗೆ ಹೋಗಲ್ಲ. ಯಡಿಯೂರಪ್ಪ ಹೇಳಿದಂತೆ ಯಾವುದೂ ಆಗಲ್ಲ, ಬಡವರ ಮನೆಗೆ ನಾನು ಬರ್ತೇನೆ, ಬಡವರ ಮನೆಯಲ್ಲಿ ಕುಳಿತು ಚರ್ಚೆ ಮಾಡ್ತೇನೆ. ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ದುಡ್ಡು ಇದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು. (ಎನ್.ಬಿ)

Leave a Reply

comments

Related Articles

error: