ಮೈಸೂರು

ಮೈನವಿರೇಳಿಸುವ ಚಿಣ್ಣರ ಸಾಹಸ..!

sahasa-2ಇಲ್ಲಿ ಕೇವಲ ಮಕ್ಕಳದ್ದೇ ಸಾಮ್ರಾಜ್ಯ. ನಾಳೆ ನಾಡನ್ನು ರಕ್ಷಿಸೋ ನಾಯಕರು ಅಲ್ಲಿದ್ದಾರೆ. ಅವರ ಕಣ್ಣಿನಲ್ಲಿ ಹೊಳೆಯೋ ತೇಜಸ್ಸುಗಳು ಅವರಲ್ಲಿರೋ ದೇಶಪ್ರೇಮವನ್ನು ಎತ್ತಿ ಹಿಡಿಯಲಿದೆ. ಅಲ್ಲಿರೋರೆಲ್ಲ ಸುಮಾರು 15ರ ವಯೋಮಾನದವರು. ಇನ್ಕೆಲವರು ಅದಕ್ಕೂ ಚಿಕ್ಕವರು. ಅವರು ಮಾಡುವ ಸಾಹಸಗಳು ಮೈ ನವಿರೇಳಿಸುತ್ತದೆ. ಒಮ್ಮೆ ಕಣ್ಮುಚ್ಚಿ ಹೃದಯ ಸ್ತಂಭನವಾದಂತಹ ಅನುಭವವನ್ನು ನೀಡುತ್ತದೆ. ಯಾಕೆಂದರೆ ಅವರು ಮಾಡೋ ಸಾಹಸಗಳೇ ಅಂಥಹುದ್ದು.

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅಡಕನ ಹಳ್ಳಿಯ ಕೈಗಾರಿಕಾ ಪ್ರದೇಶದಲ್ಲೀಗ ಚಿಣ್ಣರದ್ದೇ ಕಲರವ. 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವ ನಡೆಯುತ್ತಿದ್ದು, ವಿವಿಧ ರಾಜ್ಯಗಳ ಶಾಲಾ ಮಕ್ಕಳು ಹಾಗೂ ವಿವಿಧ ದೇಶಗಳ ಶಾಲಾ ಮಕ್ಕಳು ತಮ್ಮನ್ನು ತಾವು ರೋಮಾಂಚಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಮ್ಯಾಂಡೋ ಸೇತುವೆ, ಏಣಿಯ ಮೇಲೆ ನಡಿಗೆ, ಕೋತಿ ತೆವಳುವಿಕೆ, ಹಾವಿನ ನಡಿಗೆ, ಟೈರ್ ಚಿಮಣಿ ಏರುವುದು, ಟೈರ್ ಗೋಡೆ ಹತ್ತುವುದು ಹೀಗೆ ಒಂದೆರಡಲ್ಲ, ಅನೇಕ ವಿಧದ ಸಾಹಸಗಳು ಅಲ್ಲಿ ಅನಾವರಣಗೊಂಡಿತ್ತು. ಟೈರ್ ನಿಂದ ನಿರ್ಮಿಸಿದ ಸುರಂಗದಲ್ಲಿ ಬಾಲೆಯೋರ್ವಳು ಇಣುಕಿ ನೋಡುತ್ತಿದ್ದರೆ ಕೊಳವೆ ಬಾಯಿಯ ಚಿತ್ರಣ ಕಣ್ಣ ಮುಂದೆ ತೇಲಿ ಬಂದು ಕಣ್ಣು ಮಂಜಾಗುತ್ತಿತ್ತು. 10 ಅಡಿ ಉದ್ದದ ಈ ಸುರಂಗದಲ್ಲಿ ಮಕ್ಕಳು ತೆವಳಿಕೊಂಡು ಬರುತ್ತಿದ್ದರು.

ಇಲ್ಲಿ ಕೇವಲ ಸಾಹಸ ಕ್ರೀಡೆಗಳಿಗೆ ಮಾತ್ರ ಅವಕಾಶವಲ್ಲ. ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ತಜ್ಞರು ಇಲ್ಲಿದ್ದು, ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಪೇಪರ್ ಮಡಚುವ ಕಲೆ, ಆಕ್ರಿಲಿಕ್ ಚಿತ್ರಕಲೆ, ಹಗ್ಗಸುತ್ತುವ ಕಲೆ, ಕುಂಬಾರಿಕೆ, ಚನ್ನಪಟ್ಟಣಗೊಂಬೆ ತಯಾರಿ ಸೇರಿದಂತೆ ಹಲವು ಕಲೆಗಳನ್ನು ಮಕ್ಕಳಿಗೆ ಇಲ್ಲಿ ಕಲಿಸಲಾಗುತ್ತಿದೆ.

ಕೇವಲ ಭಾರತ ಮಾತ್ರವಲ್ಲದೇ ಮಾಲ್ಡೀವ್ಸ್, ಪಾಕಿಸ್ತಾನ್, ಸೌದಿ ಅರೇಬಿಯಾ, ಅಬುದಾಭಿ, ಶ್ರೀಲಂಕಾದಿಂದಲೂ ಬಂದ ಸ್ವಯಂ ಸೇವಕರು ಇದರಲ್ಲಿ ಪಾಲಗೊಂಡಿದ್ದಾರೆ.

ಮಕ್ಕಳ ಸಾಹಸ ಕಾರ್ಯಗಳು ಜನವರಿ ನಾಲ್ಕರವರೆಗೂ ಮುಂದುವರಿಯಲಿದೆ.

Leave a Reply

comments

Related Articles

error: