ಕರ್ನಾಟಕಪ್ರಮುಖ ಸುದ್ದಿ

ಲೈಂಗಿಕ ವಾಂಛೆಗೆ ಸಹಕರಿಸಲಿಲ್ಲವೆಂದು ಮಂಗಳಮುಖಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು (ಅ.30): ಮಂಗಳಮುಖಿಯನ್ನ ಕೊಲೆ ‌ಮಾಡಿದ್ದ ಆರೋಪಿಗೆ ಸಿಟಿಸಿವಿಲ್ ನ್ಯಾಯಾಲಯ ಜೀವಾವಧಿ‌ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಸಿಟಿಸಿವಿಲ್ ನ್ಯಾಯಧೀಶ ಶಿವಶಂಕರ್ ಬಿ ಅಮರಣ್ಣನವರ್ ಅವರು ಇಂದು ಮಂಗಳವಾರ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ಅಬ್ದುಲ್‌ ಫರೀದ್ ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. 2011ರ ಅಕ್ಟೋಬರ್ 28ರಂದು ಬೆಂಗಳೂರಿನ ಮೈಸೂರು ರಸ್ತೆಯ ಶ್ಯಾಮಣ್ಣ ಗಾರ್ಡನ್‍ನಲ್ಲಿ ಮಂಗಳಮುಖಿ ಕೊಲೆಯಗಿತ್ತು. ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ಮಂಗಳಮುಖಿ ನವೀನಾ ಅವರನ್ನ ಅಬ್ದುಲ್‌ ಫರೀದ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನ ಬಂಧಿಸಿದ್ದರು. ಸರ್ಕಾರದ ಪರ ವಕೀಲ ಚೆನ್ನಪ್ಪ. ಜಿ .ಹರಸೂರ ವಾದವನ್ನ ಮಂಡಿಸಿದ್ದರು. ಅಂತಿಮವಾಗಿ ಆರೋಪ ಸಾಬೀತಾದ ಕಾರಣ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: