
ಮೈಸೂರು
ಹುಲಿ ಓಡಿಸಲು ಕಾರ್ಯಾಚರಣೆ
ಹೆಚ್.ಡಿ.ಕೋಟೆ ತಾಲೂಕಿನ ಮಗ್ಗೆ ಗ್ರಾಮದಲ್ಲಿನ ಜಮೀನುಗಳಲ್ಲಿ ಹುಲಿಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ.
ಮಗ್ಗೆ ಮತ್ತು ಮಳಲಿ ಗ್ರಾಮಗಳಲ್ಲಿ ಹುಲಿಯು ಕಾಣಿಸಿಕೊಂಡು ಮೂವರ ಮೇಲೆ ದಾಳಿ ನಡೆಸಿತ್ತು. ಹುಲಿಯನ್ನು ಓಡಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡು ತಗುಲಿ ಓರ್ವರು ಮೃತಪಟ್ಟಿದ್ದರು. ದಸರಾದಲ್ಲಿ ಪಾಲ್ಗೊಳ್ಳುವ ಸಾಕಾನೆಗಳಾದ ಅಭಿಮನ್ಯು ಮತ್ತು ಕೃಷ್ಣರನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಕಾರ್ಯಾಚರಣೆಯಲ್ಲಿ ಎಪಿಸಿಸಿಎಫ್ ರಂಗರಾಜನ್, ಸಿಎಫ್ ಮಣಿಕಂಠನ್, ಡಿ.ಬಿ.ಕುಪ್ಪೆ, ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿನಯ್, ಎಸ್ಪಿ ರವಿ ಡಿ.ಚನ್ನಣ್ಣನವರ್, ಸಿಪಿಐ ಹರೀಶ್ ಕುಮಾರ್, ಎಸ್ ಐ ಸುರೇಶ್, ಬಸವರಾಜು, ಅಶೋಕ್ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯ ವೇಳೆ ಹುಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಬಾಳೆ ತೋಟದ ನಡುವೆ ಅಡಗಿದ್ದ ಹುಲಿ ಮರಿಗಳು ತಾಯಿ ಹುಲಿಯ ಜೊತೆ ಪುನಃ ಕಾಡಿಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.