ದೇಶಪ್ರಮುಖ ಸುದ್ದಿ

ಎಟಿಎಂನಿಂದ 4,500 ಹಣ ತೆಗೆಯುವ ಅವಕಾಶ

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ ಒಂದರಿಂದ ಎಟಿಎಂಗಳಿಂದ ಹಣ ತೆಗೆಯುವ ಮಿತಿಯನ್ನು ಹೆಚ್ಚಿಸಿದ್ದು, ಪ್ರತಿದಿನ 4,500 ಹಣವನ್ನು ತೆಗೆಯಬಹುದಾಗಿದೆ.

ನವೆಂಬರ್ 9ರಿಂದ ನೋಟು ರದ್ಧತಿಯ ಬಳಿಕ ದಿನಕ್ಕೆ 2000ರೂ. ಗಳನ್ನು ಎಟಿಎಂ ಗಳಿಂದ ತೆಗೆಯಲು ಅವಕಾಶ ಮಾಡಿಕೊಡಲಾಗಿತ್ತು. ನಂತರದ ದಿನಗಳಲ್ಲಿ 2,500ರೂ ಮಾಡಲಾಗಿತ್ತು.

ಪ್ರಸ್ತುತ ಬ್ಯಾಂಕ್ ಗಳ ಮೂಲಕ ವಾರಕ್ಕೆ 24ಸಾವಿರ ರೂಗಳನ್ನು ಮಾತ್ರ ತೆಗೆಯುವ ಅವಕಾಶವಿದ್ದು,  ಈ ವಾರದ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ತಿಳಿಸಿದೆ.

Leave a Reply

comments

Related Articles

error: