ಮೈಸೂರು

ಕೃಷ್ಣ ಕೊಲೆ ಪ್ರಕರಣ : ಮತ್ತೆ ಇಬ್ಬರು ಆರೋಪಿಗಳ ಬಂಧನ

ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ವಿ. ಮೊಹಲ್ಲಾದ 6ನೇ ಮುಖ್ಯರಸ್ತೆಯಲ್ಲಿ  ಡಿ.23ರಂದು ಹಾಡಹಗಲೇ ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆಕೃಷ್ಣ ಎಂಬವನನ್ನು ರೌಡಿಶೀಟರ್ ಗಳು ಬರ್ಬರವಾಗಿ ಕೊಲೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವಿನಾಯಕ ನಗರದ ಕಾರ್ತಿಕ್ ಅಲಿಯಾಸ್ ತಿಮ್ಮಿ, ಲೇಟ್ ಸ್ವಾಮಿ (23), ಬೋಗಾದಿ ಎರಡನೇ ಹಂತದ ಸೂರಜ್ ಅಲಿಯಾಸ್ ಮೆರವಣ್ಣ (25) ಎಂದು ಗುರುತಿಸಲಾಗಿದೆ. ಇವರನ್ನು ಗೋಕುಲಂ 3ನೇ ಹಂತದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

ಕಾರ್ತಿಕ್ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೂರಜ್ ಕೂಡ ರೌಡಿ ಶೀಟರ್ ಆಗಿದ್ದು, ಈತ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕರಿಯಪ್ಪನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮಾರ್, ಹೇಮಂತ್, ಸಂಜೂ, ಸಂದೇಶ್, ಮೂರ್ತಿ, ಧರ್ಮೇಂದ್ರ, ಅಶೋಕ ಅವರನ್ನು ಬಂಧಿಸಲಾಗಿತ್ತು.

ಕಾರ್ಯಾಚರಣೆಯಲ್ಲಿ ವಿವಿ ಪುರಂ ಠಾಣೆಯ ಇನ್ಸಪೆಕ್ಟರ್ ಸಿ.ವಿ.ರವಿ, ಹೆಬ್ಬಾಳು ಠಾಣೆಯ ಪೊಲೀಸ್ ಇನ್ಸ್’ಪೆಕ್ಟರ್ ತಿಮ್ಮೇಗೌಡ, ಜಯಲಕ್ಷ್ಮಿಪುರಂ ಠಾಣೆಯ ಪೊಲೀಸ್ ಇನ್ಸ್’ಪೆಕ್ಟರ್ ರವೀಂದ್ರ, ಸಿಸಿಬಿ ಘಟಕದ ಪೊಲೀಸ್ ಇನ್ಸ್’ಪೆಕ್ಟರ್ ಪ್ರಸನ್ನ ಕುಮಾರ್, ಪಿಎಸ್ಐ ರಾಜು ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

comments

Related Articles

error: