ಮೈಸೂರು

ನಂಜುಮಳಿಗೆಯ ಬಿಇಒ ಕಚೇರಿ ಆವರಣದಲ್ಲಿ ಅನಾಥ ಶವ ಪತ್ತೆ

ಮೈಸೂರು,ಅ.31;- ನಂಜುಮಳಿಗೆಯ ಬಿಇಒ ಕಚೇರಿ ಆವರಣದಲ್ಲಿ ಅಂದಾಜು 75ವರ್ಷ ವಯಸ್ಸಿನ ಅನಾಥ ಶವವೊಂದು ಪತ್ತೆಯಾಗಿದೆ.

ಸ್ಥಳಕ್ಕೆ ಕೆಆರ್ ಠಾಣೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿ ಭಿಕ್ಷುಕನಾಗಿದ್ದು ರಾತ್ರಿ ಇಲ್ಲಿ ಬಂದು ತಂಗಿದ್ದ ಎನ್ನಲಾಗುತ್ತಿದ್ದು, ಅನಾರೋಗ್ಯ ಪೀಡಿತನಾಗಿರಬಹುದೆಂದು ತಿಳಿಸಿದ್ದಾರೆ. ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.

ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: