ಮೈಸೂರು

ನವೆಂಬರ್ 3 : ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆನ್ಶನ್ ಹಾಲ್‍ ನ ಉದ್ಘಾಟನಾ ಸಮಾರಂಭ

ಮೈಸೂರು,ಅ.31:- ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಿಂದ ಬಂದು ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ನೆಲೆಸಿರುವ ಬಂಟರ ಸಮುದಾಯ 1973ರಲ್ಲಿ ಬಂಟರ ಸಂಘವನ್ನು ಸ್ಥಾಪಿಸಿತು. ಸಾಂಸ್ಕೃತಿಕ ಹಾಗೂ ಸಾಮಾಜಿಕ ವೇದಿಕೆಯಾಗಿ ರೂಪುತಳೆದ ಬಂಟರ ಸಂಘವು ನಿರಂತರವಾಗಿ ಬೆಳೆದು ಸಮುದಾಯವನ್ನೂ ಬೆಳೆಸುತ್ತಾ ಬಂದಿದೆ. ಸಂಸ್ಕೃತಿ, ಪರಂಪರೆಯ ಪಾಲನೆ, ಸಮುದಾಯದ ಸದಸ್ಯರಕ್ಷೇಮ, ಭಾವೈಕ್ಯದ ಪೋಷಣೆ, ಸಾರ್ವಜನಿಕ ಸೇವೆಯ ಉದ್ದೇಶದಿಂದ ಆರಂಭವಾದ ಸಂಘವು ತನ್ನ ಪರಂಪರೆಯನ್ನು ಮುಂದುವರಿಸುತ್ತಾ ಬಂದಿದೆ.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 900 ಬಂಟರ ಕುಟುಂಬಗಳನ್ನು ಸಂಘವು ಒಳಗೊಂಡಿದೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಸಂಘವು ಈಗ ಅರಮನೆಗಳ ನಗರಿಯಲ್ಲಿ ಮಹತ್ತರವಾದ ಮೈಲಿಗಲ್ಲೊಂದನ್ನು ಸ್ಥಾಪಿಸುತ್ತಿದೆ. ಇದು ಬಂಟ ಸಮುದಾಯವು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಳ್ಳುವಂಥ ಸುಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು  ಪಾರಂಪರಿಕ ನಗರಿಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ಬಂಟರ ಭವನದ ಮೂಲಕ ಎಂಬುದೇ ಮುಖ್ಯವಾದದ್ದು.

ಸಮುದಾಯಕ್ಕೆ, ಒಟ್ಟು ಸಮಾಜಕ್ಕೆ ಸೇವೆ, ಚಟುವಟಕೆಗಳನ್ನು ವಿಸ್ತರಿಸಬೇಕು ಎಂಬ ಉತ್ತರದಾಯಿತ್ವದ ಫಲವಾಗಿಯೇ ಈ ಭವನ ಸಿದ್ಧಗೊಂಡಿದೆ. ಇದು ಬಂಟರ ಚಟುವಟಿಕೆಗಳ ಕೇಂದ್ರ ಸ್ಥಾನವೂ ಆಗಲಿದೆ. ವಿಜಯನಗರ ಮೂರನೇ ಹಂತದ ಬಡಾವಣೆಯ ಎ ಬ್ಲಾಕ್‍ನ ನಂ. ಸಿಎ 1ರ 55,000 ಚದರಅಡಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಸಿಎ ನಿವೇಶನದಲ್ಲಿ ಭವನ ತಲೆ ಎತ್ತಿದೆ. ಮೈಸೂರು-ಮಂಗಳೂರು ಹೆದ್ದಾರಿಯ ಸನಿಹದಲ್ಲೇ ಇರುವ ಈ ಭವನವು ಮೈಸೂರು ನಗರದ ಬಂಟ ಸಮುದಾಯದ ಸೌಂದರ್ಯವನ್ನು ಪ್ರತಿಬಿಂಬಿಸುತ್ತಿದೆ. ಅದೂ ಕೂಡ ಪಾರಂಪರಿಕ ಶೈಲಿಯಲ್ಲಿ ಎನ್ನುವುದು ಗಮನಾರ್ಹವಾದ ಸಂಗತಿ.

ಬಂಟರ ಸಂಘದ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆನ್ಶನ್ ಹಾಲ್‍ ನ ಉದ್ಘಾಟನಾ ಸಮಾರಂಭವು ನವೆಂಬರ್ 3ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ದೀಪ ಪ್ರಜ್ವಲಿಸಲಿದ್ದಾರೆ. ಬಂಟರ ಭವನದ ಸಂಕೀರ್ಣವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಅವರು ಉದ್ಘಾಟಿಸುವರು. ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎಂಆರ್‍ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾಜಿ ಶಾಸಕರಾದ ವಾಸು, ಬಂಟರಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‍ಕುಮಾರೈ ಮಾಲಾಡಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಮಹಾಪೋಷಕರನ್ನು ಹಾಗೂ ದಾನಿಗಳನ್ನೂ ಸನ್ಮಾನಿಸಲಾಗುವುದು.

ಮಧ್ಯಾಹ್ನ 2.30ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿಗಳೂ, ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಅತಿಥಿಗಳಾಗಿ ಭಾಗವಹಿಸುವರು. ಮೈಸೂರು ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿಅಧ್ಯಕ್ಷತೆ ವಹಿಸುವರು. ಗೌರವ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೆ.ಪುಟ್ಟರಂಗಶೆಟ್ಟಿ, ಸಂಸದರಾದ ಪ್ರತಾಪಸಿಂಹ, ಧ್ರುವನಾರಾಯಣ, ಶಾಸಕ ಎಲ್.ನಾಗೇಂದ್ರ, ಲೈಫ್‍ಲೈನ್ ಫೀಡ್ಸ್‍ ಅಧ್ಯಕ್ಷ ಕಿಶೋರ್‍ಕುಮಾರ್ ಹೆಗ್ಡೆ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ, ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರಎಸ್.ಶೆಟ್ಟಿ, ಅಬುಧಾಬಿಯ ಯುಎಇಎಕ್ಸ್ ಚೇಂಜ್ ವ್ಯವಸ್ಥಾಪಕ ನಿರ್ದೇಶಕ ಸಿ.ಎ.ಸುಧೀರ್ ಕುಮಾರ್ ಶೆಟ್ಟಿ ವೈ. ಭಾಗವಹಿಸುವರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: