ಕರ್ನಾಟಕಮೈಸೂರು

ನೊಂದವರಿಗೆ ನ್ಯಾಯ ಕೊಡಿಸುವುದೇ ಪ್ರಥಮ ಆದ್ಯತೆ: ಬೈಲಕುಪ್ಪೆಯಲ್ಲಿ ಮೈಸೂರು ನೂತನ ಎಸ್ಪಿ ರವಿ ಚನ್ನಣ್ಣನವರ್

ಬೈಲಕುಪ್ಪೆ: ನೊಂದವರು, ದೌರ್ಜನ್ಯಕ್ಕೆ ಒಳಗಾದವರು ನ್ಯಾಯದ ನಿರೀಕ್ಷೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಬಂದಾಗ ಅವರಿಗೆ ನ್ಯಾಯ ಒದಗಿಸುವುದು ನಮ್ಮ ಮೊದಲ ಆದ್ಯತೆ ಎಂದು ಮೈಸೂರು ಜಿಲ್ಲಾ ನೂತನ ಎಸ್ಪಿ ರವಿ ಚನ್ನಣ್ಣನವರ್‍ ತಿಳಿಸಿದ್ದಾರೆ.

ಬೈಲಕುಪ್ಪೆ ಠಾಣೆಗೆ ಭೇಟಿ ನೀಡಿದ ಸಂದರ್ಭ ಮಾತನಾಡುತ್ತಿದ್ದ ಅವರು, ಮೊದಲೇ ನೊಂದಿರುವ ಜನತೆ ಮತ್ತೆ ಪೊಲೀಸ್ ಠಾಣೆಯಲ್ಲಿ ವಿಳಂಬ ಶಿಕ್ಷೆ ಅನುಭವಿಸುವಂತಾಗಬಾರದು. ಇಂತಹ ಪ್ರಕರಣಗಳನ್ನು ತ್ವರಿತ ಕಾಳಜಿ ಮಾಡಿ ಠಾಣಾಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.

ಪ್ರತಿ ಹಳ್ಳಿಹಳ್ಳಿಗೂ ಭೇಟಿ ನೀಡಿ, ಜೂಜಾಟ, ಅಕ್ರಮ ಮದ್ಯ ಮಾರಾಟ, ಗಾಂಜಾ ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವಂತಹ ಕೆಲಸಗಳಿಗೆ ಕೂಡಲೆ ಕಡಿವಾಣ ಹಾಕಲಾಗವುದು ಎಂದರು.

img-20160916-wa0053

ಸಸಿ ನೆಟ್ಟು ನೀರು ಹಾಕುವುದರ ಮೂಲಕ ಬೈಲಕುಪ್ಪೆ ಪೊಲೀಸ್‍ ಠಾಣೆಯಲ್ಲಿ ಆಯೋಜಿಸಿದ್ದ ‘ಠಾಣೆಗೊಂದು ವನ – ಪೇದೆಗೆರಡು ಮರ’ ಕಾರ್ಯಕ್ರಮಕ್ಕೆ ಎಸ್ಪಿ ರವಿ ಅವರು ಚಾಲನೆ ನೀಡಿದರು. ಎಎಸ್ಪಿ ಹರೀಶ್ ಪಾಂಡೆ, ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ಸಿದ್ದಯ್ಯ, ಬೈಲಕುಪ್ಪೆ ಪಿಎಸ್‍ಐ ಪಿ.ಲೋಕೇಶ್‍, ಬೈಲಕುಪ್ಪೆ ಪಿಡಿಓ ಶಿವಯೋಗ ಅವರು ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

photo-078

Leave a Reply

comments

Related Articles

error: