ಮೈಸೂರು

ಜಿಲ್ಲಾಧಿಕಾರಿಗಳಿಂದ ರಸ್ತೆ ಪರಿಶೀಲನೆ

ಮೈಸೂರಿನ ಹೈವೇ ವೃತ್ತದ ಬಳಿ ಇರುವ ರಸ್ತೆಗಳನ್ನು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಪರಿಶೀಲಿಸಿದರು.

ಶನಿವಾರ ಮುಡಾ ಅಧಿಕಾರಿಗಳೊಂದಿಗೆ ತೆರಳಿದ ಜಿಲ್ಲಾಧಿಕಾರಿ ಡಿ.ರಂದೀಪ್ ಹೈವೇ ವೃತ್ತದ ಬಳಿ ಇರುವ ರಸ್ತೆಯ ಕಾಮಗಾರಿ ಹೇಗೆ ನಡೆದಿದೆ. ಕಾಮಗಾರಿಯನ್ನು ಯಾವ ರೀತಿ ನಿರ್ವಹಿಸಲಾಗಿದೆ. ಸಂಚಾರಕ್ಕೆ ಯೋಗ್ಯವಾಗಿದೆಯೋ ಇಲ್ಲವೋ, ಸಾರ್ವಜನಿಕರಿಂದ ರಸ್ತೆಯ ಕುರಿತಂತೆ ಏನಾದರೂ ದೂರುಗಳಿವೆಯೇ ಎಂಬ ಮಾಹಿತಿಯನ್ನು ತಾವೇ ಖುದ್ದು ತೆರಳಿ ಮಾಹಿತಿ ಪಡೆದರು.

ಯಾದವಗಿರಿಗೆ ಹಾಗೂ ರುದ್ರಭೂಮಿಗೆ ತೆರಳುವ ರಸ್ತೆಗಳನ್ನು ಪರಿಶೀಲಿಸಿದರಲ್ಲದೇ ಗುತ್ತಿಗೆದಾರ ಅಶೋಕ್ ಅವರಿಂದ ಮಾಹಿತಿ ಪಡೆದರು. ಇದೇ ಪ್ರಥಮಬಾರಿಗೆ ಜಿಲ್ಲಾಧಿಕಾರಿಯೋರ್ವರು ಖುದ್ದು ತೆರಳಿ ರಸ್ತೆಯನ್ನು ವೀಕ್ಷಿಸಿರುವುದು ಗಮನಾರ್ಹವಾಗಿದೆ.

Leave a Reply

comments

Related Articles

error: