ದೇಶ

ದೆಹಲಿಯ ನೂತನ ಉಪರಾಜ್ಯಪಾಲ ಅನಿಲ್ ಬೈಜಲ್ ಪ್ರಮಾಣ

ನವದೆಹಲಿ: ದೆಹಲಿಯ ನೂತನ (ಲೆಫ್ಟಿನೆಂಟ್ ಗವರ್ನರ್) ಉಪರಾಜ್ಯಪಾಲರಾಗಿ ಅನಿಲ್ ಬೈಜಲ್ ಅವರು ಇಂದು (ಡಿ.31) ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ವಾರ ನಜೀಬ್ ಜಂಗ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ಬೈಜಲ್ ಅವರನ್ನು ನೇಮಿಸಿದೆ.

ದೆಹಲಿಯ ಸಿವಿಲ್ ಲೇನ್ಸ್’ನಲ್ಲಿರುವ ರಾಜ್’ನಿವಾಸದಲ್ಲಿ ಬೈಜಲ್ ಅವರಿಗೆ ದೆಹಲಿಯ 20ನೇ ಉಪರಾಜ್ಯಪಾಲರಾಗಿ ಹೈಕೋರ್ಟ್‍ ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಅವರು ಪ್ರಮಾಣ ವಚನ ಬೋಧಿಸಿದರು. ಬೈಜಲ್ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ 2006ರಲ್ಲಿ ನಿವೃತ್ತರಾಗಿದ್ದರು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಮತ್ತು ಯುಪಿಎ ಸರ್ಕಾರದ ಜವಾಹರಲಾಲ್ ನೆಹರು ನಗರ ನವೀಕರಣ ಯೋಜನೆಯ ತಯಾರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಿದ್ದು ನೂತನ ರಾಜ್ಯಪಾಲರನ್ನು ಅಭಿನಂದಿಸಿದರು.

Leave a Reply

comments

Related Articles

error: