ಮೈಸೂರು

ಸುತ್ತೂರು ಜಾತ್ರಾ : ‘ಕೃಷಿ ಮೇಳ’ ಪ್ರದರ್ಶನ ಮತ್ತು ಮಾರಾಟ

ಮೈಸೂರು,ಅ.31 : ಸುತ್ತೂರು ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಫೆ.1 ರಿಂದ 6ರವರಗೆ ನಡೆಯಲಿದ್ದು ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಸುಪರ್ ಫುಡ್ ಗಳಾದ ಚಿಯಾ ಹಾಗೂ ಕಿನೋವಗಳೊಂದಿಗೆ ಹೊಸಬೆಳೆ ಟೆಫ್ ರೈತರನ್ನು ಆಕರ್ಷಿಸಲಿದೆ. ಸಿರಿಧಾನ್ಯಗಳ ಪ್ರದರ್ಶನದಲ್ಲಿ ಇರಲಿದ್ದು ತಜ್ಞರು, ವರ್ತಕರು, ಸಂಸ್ಥೆಗಳು ಒಟ್ಟುಗೂಡಿ ಚರ್ಚೆ ಹಾಗೂ ಬೆಳೆಗಳ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸುಧಾರಿತ ಬಿತ್ತನೆ ಬೀಜ, ತೋಟಗಾರಿಕೆ ಸಸಿಗಳು ಹಾಗೂ ಎರೆಗೊಬ್ಬರ ಮಾರಾಟ, ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ವಿವರಗಳಿಗೆ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಚಾಲಕ ಡಾ.ಅರುಣ್ ಬಳಮಟ್ಟಿ ಮತ್ತು ಜೆ.ಜಿ.ರಾಜಣ್ಣ ಅವರನ್ನು, ದೂ.ಸಂ. 0821 232218, 96866666490, 9448978836 ಸಂಪರ್ಕಿಸಬಹುದಾಗಿದೆ ಎಂದು ಹೇಳಿಕೆ ನೀಡಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: