ಮೈಸೂರು

ನೋಟು ಮುದ್ರಣಾಲಯದ ನೌಕರರ ಕಾರ್ಯ ವಿಶ್ವದಾಖಲೆ ನಿರ್ಮಿಸಿದೆ : ರಾಮದಾಸ್

500 & 1000 ನೋಟುಗಳ ನಿಷೇಧದ ಬಳಿಕ ಅಗತ್ಯ ಕರೆನ್ಸಿ ಒದಗಿಸುವ ಜವಾಬ್ದಾರಿಯನ್ನು ದೇಶದ ನೋಟು ಮುದ್ರಣಾಲಯಗಳು ಮಾಡುತ್ತಿವೆ ಎಂದು ಮೈಸೂರಿನ ಭಾರತೀಯ ನೋಟು ಮುದ್ರಣಾಲಯದ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಎ. ರಾಮದಾಸ್ ತಿಳಿಸಿದರು.

ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿರುವ ಭಾರತೀಯ ನೋಟು ಮುದ್ರಣಾಲಯದಲ್ಲಿ 825 ಮಂದಿ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಮುದ್ರಣಾಲಯದಲ್ಲಿ ನೌಕರರ ಸಂಘದ ಅಧ್ಯಕ್ಷ ತೃಣಮೂಲ ಕಾಂಗ್ರೆಸ್ ಸಂಸದ. ಹಾಗಾಗಿ ಅಲ್ಲಿ ರಾಜಕೀಯ ದೃಷ್ಟಿಯಿಂದ ನೌಕರರು ಕೆಲಸ ಮಾಡಲು ಆಗುತ್ತಿಲ್ಲ ಎಂದಿದ್ದಾರೆ. 12 ಗಂಟೆ ಬದಲು 9 ಗಂಟೆ ಕೆಲಸ ಮಾಡುವುದಾಗಿ ಸಿಸಿರ್ ಅಧಿಕಾರಿ ಹೇಳಿದ್ದಾರೆ. ಆದರೆ ಮೈಸೂರಿನ ನೋಟು ಮುದ್ರಣಾಲಯದ ನೌಕರರು ವಾರದ ಏಳು ದಿನಗಳ ಕಾಲ ಪ್ರತಿನಿತ್ಯ ಕೆಲಸ ಮಾಡಿದ್ದಾರೆ. ದಿನದ 12 ಗಂಟೆ ಕೆಲಸ ಮಾಡಲು ಒಪ್ಪಿದ್ದಾರೆ. ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಯಾವ ನೌಕರರೂ ಇದುವರೆಗೆ ರಜೆ ಪಡೆದಿಲ್ಲ. ನಮ್ಮಲ್ಲಿ ಯಾರೂ ಅನಾರೋಗ್ಯ ಪೀಡಿತರಾಗಿಲ್ಲ. ಇನ್ನೂ ಒಂದು ತಿಂಗಳು ನೌಕರರು ಇದೇ ರೀತಿ ಕೆಲಸ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ವಿಶ್ವ ದಾಖಲೆ ನಿರ್ಮಾಣ
ಮೈಸೂರಿನ ನೋಟು ಮುದ್ರಣಾಲಯದಲ್ಲಿ ನೌಕರರು ಮಾಡಿರುವ ಕೆಲಸ ವಿಶ್ವದಾಖಲೆ ‌ನಿರ್ಮಿಸಿದೆ. ನೋಟಿಗೆ ಆಗುವ ಖರ್ಚು ಸಹ ಭಾರತದಲ್ಲಿ ಕಡಿಮೆ ಇದ್ದು, 3.4 ರೂಪಾಯಿ ಇದೆ. ನೋಟಿನ ವೇಸ್ಟೇಜ್ 2.0 ಇರುವ ಮೂಲಕ ವಿಶ್ವದಲ್ಲೇ ಕಡಿಮೆ ಇದೆ ಎಂದರು. ನಮ್ಮ ನೌಕರರು ಯಾವುದೆ ಒತ್ತಡದಲ್ಲಿ ಕೆಲಸ ಮಾಡಿಲ್ಲ. ಅವರಿಗೆ ಹೆಚ್ಚಿನ ಕೆಲಸಕ್ಕೆ ಹೆಚ್ಚಿನ ವೇತನ ಸಹ ಸಿಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ನೌಕರರೋರ್ವರು 2.4 ಮಿಲಿಯನ್ ನೋಟು ಮುದ್ರಿಸುವ ಮೂಲಕ ವಿಶ್ವದಾಖಲೆ ಆಗಿದೆ ಎಂದು ಇದೇ ವೇಳೆ ತಮ್ಮ ಸಂತಸವನ್ನ ಹಂಚಿಕೊಂಡರು. ಇದೇ ವೇಳೆ ಪೇಟಿಎಂ ಆ್ಯಪ್ ಅನ್ನು ಬಿಡುಗಡೆ ಮಾಡಲಾಯಿತು. ಮಾರ್ಚ್ 31ರ ಒಳಗೆ ಪೇಟಿಎಂ 4 ಲಕ್ಷ ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಖಾಸಗಿ ಒಡೆತನದ ಪೇಟಿಎಂನ ವೆಂಕಟೇಶ್ ತಿಳಿಸಿದರು. 150 ಮಂದಿ ಸ್ವಯಂ ಸೇವಕರು ಇದರಲ್ಲಿ ತೊಡಗಿಸಿಕೊಂಡಿದ್ದು, ಕೆಲವು ದೇವಾಲಯಗಳು, ಎನ್.ಜಿ.ಓ.ಗಳು ತಮಗೂ ಪೇಟಿಎಂ ಬಳಸುವ ವಿಧಾನವನ್ನು ತಿಳಿಸಿಕೊಡುವಂತೆ ಕೋರುತ್ತಿದ್ದಾರೆ ಎಂದರು.

Leave a Reply

comments

Related Articles

error: