ಮೈಸೂರು

ಕನ್ನಡ ಧ್ವಜಾರೋಹಣ ನೆರವೇರಿಸಿ ಸಚಿವ ಜಿ.ಟಿ.ದೇವೇಗೌಡ : ಅದ್ಧೂರಿ ಮೆರವಣಿಗೆಗೆ ಚಾಲನೆ

ಮೈಸೂರು, ನ.1:- ಮೈಸೂರು ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನಿಂದು ಅದ್ಧೂರಿಯಾಗಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡ ಧ್ವಜಾರೋಹಣ ನೆರವೇರಿಸಿ, ಕೋಟೆ ಆಂಜನೇಯ ದೇವಸ್ಥಾನದ ಬಳಿ  ನಂದಿಕಂಬಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಜ್ಯೋತ್ಸವ ಮೆರವಣಿಗೆಗೆ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.  ನಂತರ ಮಾತನಾಡಿದ ಅವರು ನಾಡಿನ‌ ಸಮಸ್ತ ಜನತೆಗೆ ಕನ್ನಡ‌ ರಾಜ್ಯೋತ್ಸವ ಶುಭಾಶಯ ಕೋರಿದರು. ಕನ್ನಡದ ಉಳಿವಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಕನ್ನಡ ಏಳಿಗೆಗೆ ನಾವು ಶ್ರಮಿಸುತ್ತಿದ್ದೇವೆ. ಕನ್ನಡಕ್ಕೆ ಹಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು. ಶಿವಶರಣರು ಬಸವರಾದಿಯಾಗಿ ಕನ್ನಡ ಹೆಚ್ಚು ಮಹತ್ವ ಪಡೆದಿದೆ. ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ನವೆಂಬರ್ 1ನೇ ತಾರೀಖಿನಿಂದ ವಿಧಾನಸೌಧದಲ್ಲಿ ಎಲ್ಲಾ ಕಾರ್ಯ ವೈಖರಿಯನ್ನು ಕನ್ನಡದಲ್ಲೇ ಮಾಡಲಿದ್ದಾರೆ. ಈ‌ ಮೂಲಕ ಕನ್ನಡಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಕನ್ನಡದ ಕಂಪು ಸಾರುವ ಸ್ತಬ್ದ‌ಚಿತ್ರಗಳು ಎಲ್ಲರ ಗಮನ ಸೆಳೆದವು. ರಸ್ತೆ ಉದ್ದಕ್ಕೂ ಕನ್ನಡದ‌ ಮಹತ್ವ ಸಾರುವ ಕನ್ನಡದ ಹಾಡುಗಳು ಮೊಳಗಿದವು. ಮೆರವಣಿಗೆಯಲ್ಲಿ ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: