ಮೈಸೂರು

ಎಲ್ಲಾ ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆ ಉಳಿಸಿ ಬೆಳಸುವ ಆಂದೋಲನಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ

ಮೈಸೂರು,ನ.1:-  ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು  ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್ ಎ ರಾಮದಾಸ್ ಅವರ ನೇತೃತ್ವದಲ್ಲಿ ಪ್ರತಿ ವಾರ ಶಾಲೆ ಮಕ್ಕಳಿಗೆ ಕಾರ್ಯಕ್ರಮ ಮಾಡುವ ಸಧೃಡ ಭಾರತ ಯೋಜನೆಯ ಅಡಿಯಲ್ಲಿ  ಕೃಷ್ಣರಾಜ ಕ್ಷೇತ್ರದ  ಎಲ್ಲಾ ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆ ಉಳಿಸಿ ಬೆಳಸುವ ಆಂದೋಲನಕ್ಕೆ ಮೈಸೂರಿನ ಸುಪ್ರಸಿದ್ದ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಇರುವ ಭುವನೇಶ್ವರಿ ದೇವಸ್ಥಾನದಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಆರಂಭಿಸಲಾಯಿತು.

ಶಾಸಕರಾದ ಎಸ್ ಎ ರಾಮದಾಸ್ ಮಾತನಾಡಿ ಕನ್ನಡದಲ್ಲಿ 49   ಅಕ್ಷರಗಳಿದ್ದು  ಈ ಎಲ್ಲಾ ಅಕ್ಷರಗಳಿಗೆ ಒಂದೊಂದು ದೇವತೆಗಳಿವೆ.  ಭುವನೇಶ್ವರಿ ದೇವಸ್ಥಾನದ ಗೋಪುರಗಳ ಮೇಲೆ ಅಕ್ಷರ  ದೇವತೆಗಳಿದ್ದು, ಒಂದೊಂದು ದೇವತೆಗಳು ಆಶೀರ್ವಾದ ಮಾಡುವುದನ್ನು ನೋಡಿರುತ್ತೇವೆ. ಪ್ರಪಂಚದಲ್ಲಿ ಒಂದೊಂದು ಅಕ್ಷರಕ್ಕೂ ಒಂದೊಂದು ದೇವತೆಗಳಿರುವ ಭಾಷೆ ಇದ್ದರೆ  ಅದು ಕನ್ನಡ ಮಾತ್ರ ಎಂದು ತಿಳಿಸಿದರು.

ಇಷ್ಟು ವರ್ಷ ವಿಶ್ವ ಸಂಸ್ಥೆ ಡೋಲಾಯಮಾನ ಪರಿಸ್ಥಿತಿಯಲ್ಲಿದ್ದು, ಪ್ರಸ್ತುತ ಸಾಲಿನಲ್ಲಿ ಅತಿ ಪುರಾತನ ಭಾಷೆ ಎಂದು  ಗಿನ್ನಿಸ್ ದಾಖಲೆಗೆ ಸೇರಿದೆ ಇನ್ನು ಸುದ್ದಿ ಎಲ್ಲಾ ಕಡೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವುದು ಸಂತೋಷದ  ವಿಷಯ.

ನಾವೆಲ್ಲರೂ ಇಂತಹ ಇತಿಹಾಸವಿರುವ ಭಾಷೆಯನ್ನು ಇಂದು ನಾವೇ ಕಡೆಗಣಿಸಿಯುತ್ತಿರುವುದು ದುಃಖದ ವಿಷಯವಾಗಿದೆ. ಇದಕ್ಕೆ ಕಾರಣವಾಗಿರುವ ಆಂಗ್ಲ ಮಾಧ್ಯಮದ ವ್ಯಾಮೋಹ  ಮತ್ತು ವೃತ್ತಿ ಬದುಕಿಗೆ ಬೇಕಿರುವ ಆಂಗ್ಲ ಭಾಷೆಯ ಅವಶ್ಯಕತೆಯಿರುವ ಕಾರಣ ಎಲ್ಲರು ಇಂದು ಆಂಗ್ಲ ಮಾಧ್ಯಮದ ಕಡೆ  ಒಲುವು ತೋರುತ್ತಿದ್ದಾರೆ ಎಂದು ತಿಳಿಸಿದರು.

ಭಾರತ ದೇಶದ ಮಕ್ಕಳ ಪ್ರಪಂಚದಲ್ಲೇ ಬಹಳ ಬುದ್ದಿಶಾಲಿಯಾಗಿದ್ದು ಎಲ್ಲಾ ದೇಶದ ಮಕ್ಕಳಿಗೆ ಹೋಲಿಸಿದರೆ ಭಾರತ ದೇಶದ ಮಕ್ಕಳ ಇಂಟಿಲಿಜೆಂಟ್ ಅತಿ ಹೆಚ್ಚಿದ್ದು ಇಲ್ಲಿನ ಬುದ್ದಿವಂತ  ವಿದ್ಯಾರ್ಥಿಗಳನ್ನು ಪ್ರಪಂಚದ ಎಲ್ಲಾ ದೇಶದ ದೂಡ್ಡ ಕಂಪನಿ ಗಳು ಕೈ ಬೀಸಿ ಕರೆಯುತ್ತಿದೆ. ಎಲ್ಲಾ ಮಕ್ಕಳ ಭವಿಷ್ಯ ರೂಪಿಸುವ ಕನಸನ್ನು ಕಟ್ಟಿಕೊಳ್ಳುವ ಪೋಷಕರಲ್ಲಿ ತಮ್ಮ ತಮ್ಮ ಮಕ್ಕಳು ವಿದೇಶದಲ್ಲಿ ದುಡಿಯಬೇಕು ಎನ್ನುವ ಆಸೆ ಇರುವ ಕಾರಣ ಆಂಗ್ಲ ಭಾಷೆಯ ಮಾಧ್ಯಮದ ಕಡೆ ಒಲವು ಹೆಚ್ಚಾಗಿದೆ ಎಂದು ತಿಳಿಸಿದರು. ನಾವು ಓದುವ ಮಾಧ್ಯಮ ಯಾವುದಾದರೂ ಆಗಿರಲಿ ಆದರೆ ಸ್ಪಷ್ಟವಾಗಿ ಕನ್ನಡವನ್ನು ಬರೆದು ಮಾತನಾಡುವ ವಿದ್ಯೆಯನ್ನು ಕಲಿಸಬೇಕಿರುವುದು  ಅವಶ್ಯಕವಾಗಿದೆ ಎಂದು ಶಾಸಕರು ತಿಳಿಸಿದರು. ನಮ್ಮಲ್ಲಿ ಇಂದು ಸುಮಾರು 3 ನಿಮಿಷ ಗಳ ಕಾಲ ಆಂಗ್ಲ ಭಾಷೆಯ ಪದಗಳನ್ನು ಉಪಯೋಗಿಸದೆ ಅಚ್ಚ ಕನ್ನಡದಲ್ಲಿ ಮಾತನಾಡುವುದು ಬಹಳ ಕಷ್ಟವಾಗಿ ಹೋಗಿರುವಷ್ಟು ಆಂಗ್ಲ ಭಾಷೆಯ ಮೇಲೆ ಅವಲಂಬಿತರಾಗಿದ್ದೇವೆ . ನಾವು ಕುಡಿಯುವ ಜಲವನ್ನು, ಇರುವ ನೆಲವನ್ನು, ಆಡುವ ಭಾಷೆಯನ್ನು ತಾಯಿಯ ರೂಪದಲ್ಲಿ  ಗೌರವಿಸಿ ಉಳಿಸುವ ಅವಶ್ಯಕತೆ ಇದೆ. ಮುಂದಿನ ವರ್ಷ  ಅಚ್ಚ  ಕನ್ನಡ ಭಾಷೆಯನ್ನ ಯಾರು ಹೆಚ್ಚು ಬಳುಸುತ್ತಾರೆ ಅವರಿಗೆ ಬಹುಮಾನ ವಿತರಿಸುವಂತಹ ಒಂದು ಸ್ಪರ್ಧೆಯನ್ನು ಏರ್ಪಡಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸಕೌರ್ಯಗಳಿದ್ದು ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆಯನ್ನು ನೀಡಲಾಗಿದೆ.  ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಒಳ್ಳೆಯ ಶಿಕ್ಷಕರು ಸಹ ಇದ್ದು ಆದರೂ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿರುವುದು ಶೋಚನೀಯ.  ಈಗಿನ ಪರಿಸ್ಥಿತಿ ಪ್ರಕಾರ ಮುಂದಿನ ವರ್ಷ 2019  ಕ್ಕೆ ಕೃಷ್ಣರಾಜ ಕ್ಷೇತ್ರದಲ್ಲಿ 4  ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು. ಇದಕ್ಕೆ ಮೂಲ ಕಾರಣ ಮಕ್ಕಳು ದಾಖಲಾಗದೆ ಇರುವುದು. ಇವೆಲ್ಲ ಕಾರಣಗಳಿಂದ ಇಂದು ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದಿದ್ದು ಇದನ್ನು ತಡೆಯಲು ಎಲ್ಲರೂ ಸೇರಿ ನಿರ್ಣಯವನ್ನು ಮಾಡಬೇಕಿದೆ. ಎಲ್ಲರೂ ತಮ್ಮ ಸುತ್ತಮುತ್ತಲಿನ ಕನ್ನಡ ಶಾಲೆಗಳನ್ನು ಬೆಳೆಸಲು ಸಹಕಾರಿಯಾಗುತ್ತೇವೆ ಎಂದು ನೆರೆದಿದ್ದ ಶಾಲೆ ಮಕ್ಕಳು, ನಗರಪಾಲಿಕೆ ಸದಸ್ಯರು, ಶಾಲೆಯ ಶಿಕ್ಷಕರು  ಸಂಕಲ್ಪ ಮಾಡಿ  ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು ಹಾಗೂ ಮಾಡಿಯೇ ಪ್ರತಿಜ್ಞೆ ಕಾರ್ಯರೂಪಕ್ಕೆ ತರಲು ನಿರಂತರ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಫೆಬ್ರವರಿ ತಿಂಗಳಿನಲ್ಲಿ ನಗರ ಪಾಲಿಕೆ ಸದಸ್ಯರೆಲ್ಲರೂ ತಮ್ಮ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ” ಸರ್ಕಾರೀ ಶಾಲೆ ಉಳಿಸಿ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಬೆಳಸಿ” ಎನ್ನುವ ಅಭಿಯಾನವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ  ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಶಾಲೆಯ 10 ನೇ  ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಅವಶ್ಯಕವಾಗಿರುವ ತರಬೇತಿ  ನೀಡಿ ಯಾವುದೇ ಕಾರಣಕ್ಕೂ ನಪಾಸು ಆಗದೆ ಉತ್ತೀರ್ಣರಾಗಿ 100  ಕ್ಕೆ  100  ರಷ್ಟು ಫಲಿತಾಂಶ ಬರಲು ಶ್ರಮಿಸಲಾಗುವುದು ಎಂದು ತಿಳಿಸಿದರು . ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ವರ್ಗಾಯಿಸಿ ಅಂಗನವಾಡಿ ನಂತರ ಸರ್ಕಾರೀ ಶಾಲೆಯಲ್ಲೇ ಸೇರಲು ಅನುಕೂಲವಾಗುವ ಹಾಗೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪ್ರಪಂಚದಲ್ಲೇ ಅತಿ ಬುದ್ಧಿಶಾಲಿ ವ್ಯಕ್ತಿ ಎಂದು ಗುರುತಿಸಿಕೊಂಡಿರುವ ಕನ್ನಡ ನಾಡನ್ನು ವಿಶ್ವಾದ್ಯಂತ ಪರಿಚಯಿಸಿದ ಮಹಾನ್ ವ್ಯಕ್ತಿಯಾದ ಭಾರತ ರತ್ನ  ಸರ್ ಎಂ ವಿಶ್ವೇಶ್ವರಯ್ಯ ಅವರು ಸಹ ಕನ್ನಡ ಮಾಧ್ಯಮದಲ್ಲೇ ಓದಿದವರು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್ ಎ ರಾಮದಾಸ್ ರವರು,  ಕೃಷ್ಣರಾಜ ಕ್ಷೇತ್ರದ ಬಿಜೆಪಿ ನಗರಪಾಲಿಕೆ ಸದಸ್ಯರು,   ಕೃಷ್ಣರಾಜ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳು, ಶಿಕ್ಷಕರು, ಪ್ರಾಂಶುಪಾಲರು,  ಅರಮನೆ ಮಂಡಳಿ, ದಕ್ಷಿಣ ಶಿಕ್ಷಣ ಕ್ಷೇತ್ರಾಧಿಕಾರಿ,  ಹಲವು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: