ಮೈಸೂರು

ಹೊಸ ವರ್ಷದ ಸ್ವಾಗತಕ್ಕೆ ಹಲವು ಕಾರ್ಯಕ್ರಮ

pallaviಹೊಸ ವರ್ಷವನ್ನು ಸ್ವಾಗತಿಸಲು ಮೈಸೂರು ಸಜ್ಜಾಗಿದೆ. ನಗರದ ಪ್ರಮುಖ ಹೋಟೆಲ್ ಗಳು ಈಗಾಗಲೇ ಸಿದ್ಧತೆ ನಡೆಸಿವೆ. ಜಿಲ್ಲಾಡಳಿತವೂ ಕೂಡ ಹೊಸವರ್ಷವನ್ನು ಸ್ವಾಗತಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅರಮನೆ ಆವರಣದ ಬಳಿ ಇರುವ ಕೋಟೆ ಆಂಜನೇಯ ದೇವಳದ ಎದುರು ಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಡಿ.31ರಂದು(ಇಂದು) ಸಂಜೆ 8ರಿಂದ 10ರವರೆಗೆ ನಡೆಯಲಿದೆ.

ರಾತ್ರಿ 10.30ರಿಂದ 12ರವರೆಗೆ ಅರಮನೆ ಆವರಣದ ಮುಂಭಾಗದಲ್ಲಿ ಪೊಲೀಸ್ ಬ್ಯಾಂಡ್  ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯರಾತ್ರಿ 12ರಿಂದ 12.15ರವರೆಗೆ ಅರಮನೆಯಲ್ಲಿ ವಿದ್ಯುದ್ದೀಪಾಲಂಕಾರವಿರಲಿದೆ. ಅಷ್ಟೇ ಅಲ್ಲದೇ ಮಧ್ಯರಾತ್ರಿ 12ರಿಂದ 12.05ರವರೆಗೆ ಆಕಾಶದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸುವ ಶಬ್ದರಹಿತ ಸಿಡಿಮದ್ದು ಸಿಡಿಸಲಾಗುವುದು ಮೈಸೂರು ಅರಮನೆ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

Leave a Reply

comments

Related Articles

error: