ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ದೋಚಿದ ಕಳ್ಳರು

ಮೈಸೂರು,ನ.2:- ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿರುವ ಚಿನ್ನಾಭರಣ, ನಗದು ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ಕಲ್ಯಾಣಗಿರಿಯಲ್ಲಿ ನಡೆದಿದೆ.

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗೌಸ್ ಷರೀಫ್ ಎಂಬವರು ದೂರು ದಾಖಲಿಸಿದ್ದಾರೆ. ಅವರು ಅ.23 ರಂದು ರಾತ್ರಿ 9.30ರ ಸುಮಾರಿಗೆ  #44, ಎಂ ಐ ಜಿ-1, ಕಲ್ಯಾಣಗಿರಿಯಿಂದ ಸಂಸಾರ ಸಮೇತ ಚಿತ್ರದುರ್ಗಕ್ಕೆ ಹೋಗಿದ್ದರು. ಅ.30 ರಂದು ಸಂಜೆ ಸುಮಾರು 7ಗಂಟೆಯ ಸುಮಾರಿಗೆ ಗೌಸ್ ಷರೀಫ್ ಮಾವ ಹಮೀದ್ ಅವರು ಪೋನ್ ಮಾಡಿ ನಿಮ್ಮ ಮನೆ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ. ಗೌಸ್ ಷರೀಫ್ ಅ. 31ರಂದು ಬೆಳಗಿನ ಜಾವ 3 ಗಂಟೆಗೆ ಬಂದು ನೋಡಲಾಗಿ ಮನೆಯ ಮುಂಬಾಗಿಲಿನ ಬೀಗ ಮುರಿದಿತ್ತು, ಬೆಡ್ ರೂಂಗಳಲ್ಲಿದ್ದ ಬೀರುಗಳ ಬಾಗಿಲನ್ನು ಜಖಂಗೊಳಿಸಿ ಅವುಗಳಲ್ಲಿದ್ದ ಸುಮಾರು 10 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು ಜೊತೆಗೆ ಚಿನ್ನದ ಡಾಲರ್, ಸುಮಾರು 10 ಗ್ರಾಂ ತೂಕದ ಒಂದು ಚಿನ್ನದ ಚೈನ್ ಮತ್ತು ಜೊತೆಗೆ ಚಿನ್ನದ ಡಾಲರ್, ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಬೆಳ್ಳಿಯ ಆಭರಣಗಳು ಸುಮಾರು 1 ಕೆ.ಜಿ., ಸೋನಿ ಎಲ್.ಇ.ಡಿ. ಟಿ.ವಿ. 32 ಇಂಚು, ಸ್ಯಾಮ್ ಸಂಗ್, ಮೈಕ್ರೋ ಸಾಫ್ಟ್ ಲೂಮಿಯಾ ಹಾಗೂ ನೋಕಿಯಾ ಎನ್-900 ಮೊಬೈಲ್ ಗಳು, ಬೈನಾಕ್ಯೂಲರ್, ಎರಡು ಮೈಸೂರು ಸಿಲ್ಕ್ ಸೀರೆಗಳು, ಮಕ್ಕ ಮದೀನಾ ಚಿನ್ನದ ಡಾಲರ್, ಸುಮಾರು 10 ಗ್ರಾಂ ತೂಕದ ಚಿನ್ನದ ಮೂಗುತಿಗಳು ಮತ್ತು ಒಂದು ಡೈಮೆಂಡ್ ಚಿನ್ನದ ಮೂಗುತಿ, ಒಂದು ಕೆನಾನ್ ಕ್ಯಾಮರಾ ಮತ್ತು ಸೌದಿ ಅರಬೀಯಾದ ಕರೆನ್ಸಿಗಳು, ಮತ್ತೊಂದು ಬೆಡ್ ರೂಂನ ಬೀರುವಿನಲ್ಲಿಟಿದ್ದ ನಗದು 1 ಲಕ್ಷ ರೂಗಳು ಒಟ್ಟು ಅಂದಾಜು ಬೆಲೆ ಸುಮಾರು 2,50,000 ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: