ಮೈಸೂರು

ವಿಜಯ ನಗರದಲ್ಲಿ ಸುಮಾರು 15 ಅಂಗಡಿಗಳ ತೆರವು ಕಾರ್ಯಾಚರಣೆ

ಮೈಸೂರು,ನ.2:- ನ್ಯಾಯಾಲಯದ  ಆದೇಶದ ಮೇರೆಗೆ ಇಂದು ಮುಂಜಾನೆಯಿಂದಲೇ ವಿಜಯ ನಗರದಲ್ಲಿ ಸುಮಾರು 15 ಅಂಗಡಿಗಳ ತೆರವು  ಕಾರ್ಯಾಚರಣೆ ಆರಂಭವಾಗಿದೆ.

ಕೋರ್ಟ್ ಆದೇಶದ ಮೇರೆಗೆ ನ್ಯಾಯಾಲಯದ  ಅಮೀನ್  ಅವರ ನೇತೃತ್ವದಲ್ಲಿ  ಹೋಟೆಲ್ ಅಂಗಡಿ ಮುಂಗಟ್ಟು ಗಳನ್ನು   ತೆರವು ಗೊಳಿಸಲಾಯಿತು. ಹಲವು ವರ್ಷಗಳಿಂದಲೂ ಜಾಗಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿತ್ತು.  ಇಂದು ನ್ಯಾಯಾಲಯದ ಆದೇಶದ ಮೇರೆಗೆ ತೆರವು ಕಾರ್ಯ ಮಾಡಲಾಗುತ್ತಿದೆ. ವಿಜಯ ನಗರ ಮೊದಲನೇ ಹಂತದ ದೊಡ್ಡ  ತಮ್ಮಯ್ಯ  ವೃತ್ತದ ಬಳಿ ಇರುವ ಸುಮಾರು 15 ಅಂಗಡಿ ಗಳ ತೆರವು ಗೊಳಿಸಿ ಕಾಂಪೌಂಡ್  ನಿರ್ಮಿಸಲಾಗಿದೆ. ಪೊಲೀಸ್  ಸಿಬ್ಬಂದಿಗಳ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಟ್ಟು 1 5 ಅಂಗಡಿಗಳ ತೆರವು ಗೊಳಿಸಲಾಗಿದೆ. ವಿಜಯನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್    ಡಿ.ಜಿ ಕುಮಾರ್ ,ಹಾಗೂ ನರಸಿಂಹ ರಾಜ ವಿಭಾಗದ ಎ ಸಿ ಪಿ ಸಿ.ಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪೊಲೀಸರ ಸೂಕ್ತ ಬಂದೋಬಸ್ತ್  ನಲ್ಲಿ ತೆರವು ಗೊಳಿಸಲಾಗುತ್ತಿದ್ದು, ಇದೇ ಜಾಗದಲ್ಲಿ ಕೋಳಿ ಅಂಗಡಿ, ಹೋಟೆಲ್, ಹಣ್ಣಿನ ಅಂಗಡಿ , ಪಂಕ್ಚರ್  ಶಾಪ್ ಸೇರಿದಂತೆ ವಿವಿಧ ಸುಮಾರು 15 ಅಂಗಡಿಗಳಲ್ಲಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು.  ಸುಮಾರು 8ವರ್ಷ ಗಳಿಂದಲೂ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿತ್ತು  ಎಂದು ಮೂಲಗಳು  ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: