ಪ್ರಮುಖ ಸುದ್ದಿ

ವಕೀಲರ ಹತ್ಯೆ ಖಂಡಿಸಿ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ರಾಜ್ಯ(ಚಾಮರಾಜನಗರ)ನ.2:-ವಿಜಯಪುರದಲ್ಲಿ ನಡೆದ ವಕೀಲರ ಹತ್ಯೆಯನ್ನು ಖಂಡಿಸಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಜಿಲ್ಲಾ ವಕೀಲರ ಸಂಘದಿಂದ, ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದ ದತ್ತಾತ್ರೆಯ ಲಕ್ಷ್ಮಣ ಬಂಡಿವಡ್ಡರ (37) ಎಂಬ ವಕೀಲರನ್ನು ಹತ್ಯೆಮಾಡಲಾಗಿದೆ. ಜಮೀನಿನ ವ್ಯಾಜ್ಯವನ್ನು ವಾದಿಸಬಾರದೆಂದು ವಕೀಲರಿಗೆ ಪೀಡಿಸುತ್ತಿದ್ದು, ಇದಕ್ಕೆ ಒಪ್ಪದ್ದಕ್ಕೆ ವಕೀಲರ ಮೇಲೆ ಹಲ್ಲೆ ಮಾಡಿ ಕೊಲೆಮಾಡಲಾಗಿದೆ. ರಾಜ್ಯದಲ್ಲಿ ವಕೀಲರ ಮೇಲೆ ಇಂತಹ ಹತ್ಯೆ ಪ್ರಕರಣಗಳು ಸಾಕಷ್ಟು ಬಾರಿ ನಡೆದಿದೆ, ನಡೆಯುತ್ತಲೇ ಇದೆ. ಇಂತಹ ನ್ಯಾಯ ಕೊಡಿಸುವ ವಕೀಲರಿಗೆ ಭದ್ರತೆಯ ಕೊರತೆ ಸಾಕಷ್ಟು ಕಾಡುತ್ತಿದ್ದು ಅನ್ಯಾಯವಾಗುತ್ತಿದೆ. ಹಾಗಾಗಿ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸಬಾರದು. ಇಂತಹವರಿಗೆ ತಕ್ಕ ಶಿಕ್ಷೆಯಾಗಬೇಕು. ಸರ್ಕಾರ ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕು. ವಕೀಲರಿಗೆ ಭದ್ರತೆ ಒದಗಿಸಬೇಕು. ಹಾಗಾಗಿ ಇಂದು ನಾವು ನ್ಯಾಯಾಲಯದ ಕಲಾಪಗಳಿಗಿಂದ ದೂರ ಉಳಿಯುವುದಾಗಿ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: