ಕ್ರೀಡೆ

ಕೊಹ್ಲಿ-ಶರ್ಮಾ ಹೆಸರಿನಲ್ಲಿ ಜಂಟಿ ದಾಖಲೆ

ತಿರುವನಂತಪುರ,ನ.2-ವೆಸ್ಟ್ಇಂಡೀಸ್ ಹಾಗೂ ಭಾರತ ನಡುವಿನ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಜಂಟಿ ದಾಖಲೆ ಬರೆದಿದ್ದಾರೆ.

ಕೊನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ, ಶರ್ಮಾ ಜೋಡಿಯಾಗಿ ಅತಿ ವೇಗದಲ್ಲಿ 4000 ರನ್ ತಲುಪಿದ ದಾಖಲೆ ಬರೆದಿದ್ದಾರೆ.

ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 80 ಜತೆಯಾಟಗಳಲ್ಲಿ ದ್ರಾವಿಡ್ಗಂಗೂಲಿ 4000 ರನ್ ಗಳಿಸಿದ್ದರು. ಇದೀಗ ಕೊಹ್ಲಿರೋಹಿತ್ ಕೇವಲ 66 ಜೊತೆಯಾಟಗಳಲ್ಲಿ ದಾಖಲೆಯನ್ನು ಮುರಿದಿದ್ದಾರೆ.

ಅಷ್ಟೇ ಯಾಕೆ ರೋಹಿತ್ ಹಾಗೂ ಕೊಹ್ಲಿ ಇದುವರೆಗೆ 15 ಶತಕದ ಜೊತೆಯಾಟಗಳಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ ಜೋಡಿಯ ಹೆಸರಲ್ಲಿ ಐದು ದ್ವಿಶತಕ ಜತೆಯಾಟವೂ ಸೇರಿವೆ. ಇದು ಏಕದಿನದಲ್ಲಿ ಅತಿ ಹೆಚ್ಚು ದ್ವಿಶತಕ ಜತೆಯಾಟವಾಗಿದೆ.

ಒಟ್ಟಾರೆಯಾಗಿ ಜೋಡಿಯಾಗಿ 4000 ರನ್ ಜತೆಯಾಟ ಪೇರಿಸಿದ ಆರನೇ ಭಾರತೀಯ ಹಾಗೂ ಒಟ್ಟಾರೆಯಾಗಿ ವಿಶ್ವದ 13ನೇ ಜೋಡಿ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಹ್ಯಾಟ್ರಿಕ್ ಶತಕ ಸೇರಿದಂತೆ 151 ಸರಾಸರಿಯಲ್ಲಿ ಒಟ್ಟು 453 ರನ್ ಬಾರಿಸಿದ ಕ್ಯಾಪ್ಟನ್ ಕೊಹ್ಲಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜವಾಗಿದ್ದರು. ಅತ್ತ ರೋಹಿತ್ ಸಹ ಎರಡು ಬಾರಿ ಶತಕೋತ್ತರ ಶತಕಾರ್ಧದ ನೆರವಿನೊಂದಿಗೆ 389 ಸರಾಸರಿಯಲ್ಲಿ ಒಟ್ಟು 389 ರನ್ ಕಲೆ ಹಾಕಿದ್ದರು. (ಎಂ.ಎನ್)

Leave a Reply

comments

Related Articles

error: