ಮೈಸೂರು

ನೂತನ ಅಧ್ಯಕ್ಷರಾಗಿ ಇಸ್ರೋ ವಿಜ್ಞಾನಿ ಪ್ರೊ.ವಿ.ಜಗನ್ನಾಥ್ ಆಯ್ಕೆ

ಮೈಸೂರು,ನ.2 : ಫೆಡರೇಷನ್ ಆಫ್ ಮೈಸೂರು ಸಿಟಿ ಕಾರ್ಪೋರೇಷನ್ ವಾರ್ಡ್ಸ್ ಪಾರ್ಲಿಮೆಂಟ್ ನ  ನೂತನ ಅಧ್ಯಕ್ಷರಾಗಿ ಇಸ್ರೋದ ನಿವೃತ್ತ ವಿಜ್ಞಾನಿ  ಪ್ರೊ.ವಿ.ಜಗನ್ನಾಥ್, ಕಾರ್ಯದರ್ಶಿಯಾಗಿ ಎಂ.ಜೀವನ್ ಪ್ರಕಾಶ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎನ್.ಕುಮಾರಸ್ವಾಮಿ, ಶಿವಕುಮಾರ್, ಸಹಕಾರ್ಯದರ್ಶಿಯಾಗಿ ಕೆ.ಎಂ.ಸತೀಶ್ಚಂದ್ರ, ಖಜಾಂಚಿಯಾಗಿ ವೀಣಾ, ನಿರ್ದೇಶಕ ಹಾಗೂ ಸಲಹೆಗಾರರಾಗಿ ಪ್ರೊ.ಕೆ.ಎಂ.ನಾಗಪತಿ ಹಾಗೂ ಇತರರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ.

ಸಂಸ್ಥೆಯು ಪ್ರತಿ ಭಾನುವಾರ ಕುಂಬಾರ ಕೊಪ್ಪಲಿನ ಶೂನ್ಯ ಕಸ ನಿರ್ವಹಣಾ ಘಟಕದಲ್ಲಿ ಬೆಳಗ್ಗೆ 10 ರಿಂದ 12ರರವರಗೆ ಶೂನ್ಯ ಕಸ ನಿರ್ವಹಣೆಯ ಬಗ್ಗೆ ತಾಂತ್ರಿಕ ತರಬೇತಿಯನ್ನು ಏರ್ಪಡಿಸಲಾಗುವುದು ಎಂದು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: