ಪ್ರಮುಖ ಸುದ್ದಿ

ಶ್ರಮದಾನದ ಮೂಲಕ ಸ್ವಚ್ಛತೆ

ರಾಜ್ಯ(ಮಡಿಕೇರಿ)ನ.2:- ಸೋಮವಾರಪೇಟೆ  ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ಕಲ್ಲು-ಮರಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಮಳೆಯಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ಶೇಖರಣೆಗೊಂಡಿದ್ದ ಮಣ್ಣುಮಿಶ್ರಿತ ಮರಳು, ಕಲ್ಲುಗಳನ್ನು ತೆಗೆದು ವಾಹನ ಸವಾರರಿಗೆ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಟ್ಟರು.

ವಿದ್ಯಾರ್ಥಿಗಳ ಶ್ರಮದಾನ ಸಂದರ್ಭ ಕಾಲೇಜು ಪ್ರಾಂಶುಪಾಲ ಎಚ್.ಎಸ್.ಶರಣ್, ಉಪನ್ಯಾಸಕರಾದ ಯೋಗೇಶ್‍ಕುಮಾರ್, ಮನು, ಕಾವ್ಯ, ಭವ್ಯ ಸೇರಿದಂತೆ ಇತರರು ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: