ಸುದ್ದಿ ಸಂಕ್ಷಿಪ್ತ
ಅಭಿನಂದನೆ
ಕರ್ನಾಟಕ ರಾಜ್ಯ ಅರಸು ಮಹಾಸಭಾ ವತಿಯಿಂದ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರು ವಿವಿ ಯಿಂದ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದಿರುವ ಪತ್ರಿಕೋದ್ಯಮ ವಿಭಾಗದ ಶಿವೇಂದ್ರ ಜಿ.ಅರಸ್ ಅವರಿಗೆ ಉಡುಪಿ ಕೃಷ್ಣಮಠದ ಶ್ರೀ ವಿಶ್ವಾಧಿರಾಜ ತೀರ್ಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಸಂಘದ ಪದಾಧಿಕಾರಿಗಳಾದ ಕೆಂಪರಾಜೇ ಅರಸ್, ನಂದೀಶ್ ಜಿ.ಅರಸ್, ಇನ್ನಿತರರು ಹಾಜರಿದ್ದರು.