ಮೈಸೂರು

ಕನ್ನಡ ರಾಜ್ಯೋತ್ಸವ: ಡಾ.ಡಿ.ಕೆ.ರಾಜೇಂದ್ರ ಅವರಿಗೆ ಉದಯಶ್ರೀ ಪ್ರಶಸ್ತಿ ಪ್ರದಾನ

ಮೈಸೂರು,ನ.3-ಉದಯಗಿರಿ ಕನ್ನಡ ಸಂಘದ ವತಿಯಿಂದ ಉದಯಗಿರಿಯಲ್ಲಿರುವ ಸಿಟಿಜನ್ ಶಾಲಾ ಆವರಣದಲ್ಲಿ ಶನಿವಾರ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಮಹಜಬೀನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಅವರಿಗೆ ಉದಯಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ವೇಳೆ ರಾಜೇಂದ್ರ ಅವರ ಪತ್ನಿ ಜತೆಗಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಗೌರವಾಧ್ಯಕ್ಷ ಆರ್.ಕೆ.ಸೂರ್ಯವಂಶಿ, ನಗರಪಾಲಿಕೆ ಸದಸ್ಯರಾದ ಅಯೂಬ್ ಖಾನ್, ಸೂಯೂಬ್ ಖಾನ್, ವಕೀಲ ನಾಗರಾಜು, ಟಿ.ವಿದ್ಯಾಸಾಗರ ಕದಂಬ, ಜಯಕುಮಾರ್ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: