ಮೈಸೂರು

ಆಧುನಿಕ ಕವಿಗಳಲ್ಲಿ ಸೂಕ್ಷ್ಮತೆಯ ಪ್ರಮಾಣ ಕಡಿಮೆ : ಡಾ.ಕವಿತಾ ರೈ

ಕವಿಗಳಿಗೆ ಸೂಕ್ಷ್ಮ ಸಂವೇದನೆ ಇರಲಿದೆ. ಆಧುನಿಕತೆಯ ಕವಿಗಳಿಗೆ ಸೂಕ್ಷ್ಮತೆಯ ಪ್ರಮಾಣ ಕಡಿಮೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಕವಿತಾ ರೈ ಅಭಿಪ್ರಾಯಪಟ್ಟರು.

ಕರ್ನಾಟಕ ಕಾವಲುಪಡೆ ವತಿಯಿಂದ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನೂತನ ವರ್ಷದ ಸ್ವಾಗತಕ್ಕಾಗಿ ಆಯೋಜಿಸಿದ ಹೊಸ ನಾಳೆ ಕಾವ್ಯ ಬೆಳೆ ಭಾವಗೋಷ್ಠಿಯನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಗೂಂಡಾಗಳ ನಡುವೆ ಹೋರಾಟದ ಹಾದಿ ಕಠಿಣ. ಆದರೆ ಕಾವಲು ಪಡೆಯು ಉತ್ತಮವಾಗಿ ಸ್ಪಂದಿಸುತ್ತ ಮುನ್ನಡೆಯುತ್ತಿದೆ. ಈ ನಿಜವಾದ, ಸತ್ಯಮಾರ್ಗದ ಹೋರಾಟಕ್ಕೆನಮ್ಮ ಸಹಮತವಿದೆ ಎಂದರು.

ನನ್ನ ದೇಶದ ಮಹಾಕಾವ್ಯ ಅರ್ಥ ಮಾಡಿಕೊಳ್ಳದವ ಈ ದೇಶದವನಲ್ಲ ಎಂದು ಕವಿಗಳು ಹೇಳಿದ್ದಾರೆ. ಕವಿಗಳು ಈ‌ ದೇಶದ ಮೌಲ್ಯ, ಆಸ್ತಿ ಎಂದು ತಿಳಿಸಿದರು. ಕವಿಗಳಿಗೆ ಛಂದಸ್ಸಿನ ಜೊತೆಗೆ ಇರುವ ಸಂಬಂಧ ಬಹಳ ಹತ್ತಿರದ್ದು. ಇವತ್ತಿನ ಜೀವನಕ್ಕೆ ನಮಗೆ ಗೊತ್ತಿಲ್ಲದೆ ಹುತ್ತ ಬೆಳೆಯುತ್ತಿದೆ. ಅಡಗು ತಾಣಗಳಿಗಾಗಿ ಹಾತೊರೆಯುತ್ತಿದೆ. ಹಣ ಬಂದರೆ‌ ಸಾಕು ವ್ಯಕ್ತಿ ಸಭ್ಯನಾಗಲು ಮುಂದಾಗುತ್ತಾನೆ. ಹಣ ಇಲ್ಲದವನ ಬಳಿ ಆತನ ನಿಜವಾದ ವ್ಯಕ್ತಿತ್ವ ಗೊತ್ತಾಗಲಿದೆ ಎಂದರು.

ಈ ಸಂದರ್ಭ ವಿದ್ವಾಂಸ ಡಾ.ಮಳಲಿ ವಸಂತಕುಮಾರ, ಸಾಹಿತಿ ಹಾಗೂ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: