ದೇಶಪ್ರಮುಖ ಸುದ್ದಿ

ಮನೆ ನಿರ್ಮಾಣಕ್ಕೆ ಮೋದಿ ಬಂಪರ್ ಕೊಡುಗೆ

ಎಂದಿನಂತೆ  ಭಾಯಿಯೋಂ, ಬೆಹನೋ ಎನ್ನುವ ಮೂಲಕ ಭಾಷಣ ಆರಂಭಿಸಿದ   ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಹೊಸ ವರುಷದ ಶುಭಾಶಯವನ್ನು ಕೋರಿದರಲ್ಲದೇ,  ಹೊಸ ವರುಷವನ್ನು ಹೊಸ ಕನಸಿನೊಂದಿಗೆ ಆರಂಭಿಸೋಣ ಎಂದು ಹೇಳುತ್ತ ಕಪ್ಪು ಹಣದ ವಿರುದ್ಧ  ತಮ್ಮ ಸಮರ ಮುಂದುವರಿಯಲಿದೆ ಎನ್ನುವುದನ್ನು ತಿಳಿಸಿದ್ದಾರೆ.

ದೇಶದಲ್ಲಿ 1000, 500ಮುಖಬೆಲೆಯ ನೋಟುಗಳ ಅಪಮೌಲ್ಯದ ಬಳಿಕ ಮತ್ತೆ 45ನಿಮಿಷಗಳ ಕಾಲ ಭಾಷಣ ಮಾಡಿದರು. 500,1000ನೋಟುಗಳು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದವು. ಕಪ್ಪು ಹಣ ಮತ್ತು ಭ್ರಷ್ಟಾಚಾರದಿಂದ ಪ್ರಾಮಾಣಿಕರಿಗೆ ಸಂಕಷ್ಟವಾಗುತ್ತಿತ್ತು. ದೇಶದ ಜನತೆ ಅವರದ್ದೇ ಹಣವನ್ನು ವಾಪಸ್ ಪಡೆಯಲು ತುಂಬಾ ತೊಂದರೆ ಅನುಭವಿಸಿದ್ದೀರಿ. ಕೆಲವರು ನನಗೆ ಬೈದುಕೊಂಡಿರಿ, ಇನ್ಕೆಲವರು ಶಹಬ್ಬಾಸ್ ಗಿರಿಯನ್ನು ಕೊಟ್ಟಿದ್ದೀರಿ. ಸಾವಿರಾರು ಪತ್ರಗಳು ಈ ಕುರಿತು ನನ್ನ ಕೈ ಸೇರಿವೆ ಲಾಲ್  ಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ್ ನಾರಾಯಣ, ಕಾಮರಾಜು ಇಂದು ಬದುಕಿದ್ದಿದ್ದರೆ ನಿಜಕ್ಕೂ ಸಂತಸ ಪಡುತ್ತಿದ್ದರು ಎಂದು  ತಿಳಿಸಿದ್ದಾರೆ.

ಈ ಸರಕಾರ ಪ್ರಾಮಾಣಿಕರ ಪರವಾಗಿದೆ. ಅಪ್ರಾಮಾಣಿಕರನ್ನು ಸರಿದಾರಿಗೆ ತರಲು ಉಪಯುಕ್ತ ವಾತಾವರಣವನ್ನು ಸಿದ್ಧಗೊಳಿಸಲಿದೆ. ಸಣ್ಣ ವರ್ತಕರಿಗೆ ಬ್ಯಾಂಕ್ ಗಳಿಂದ ನೀಡಲಾಗುವ ಸಾಲಕ್ಕೆ ಕೇಂದ್ರ ಸರ್ಕಾರ ಭದ್ರತೆ ನೀಡಲಿದೆ. ಅವರಿಗೆ ನೀಡುವ ಸಾಲವನ್ನು ಶೇ.20ರಿಂದ ಶೇ.25ಕ್ಕೆ ಏರಿಸಬೇಕು ಎಂದಿದ್ದಾರೆ.

ಮನೆ ನಿರ್ಮಾಣಕ್ಕೆ ಬಂಪರ್ ಕೊಡುಗೆ ನೀಡಿದ ಮೋದಿ, ಬಡವರು ನಗರ ಪ್ರದೇಶದಲ್ಲಿ ಪ್ರಧಾನಿ ನಿವಾಸ ಯೋಜನೆಯಡಿಯಲ್ಲಿ ಮನೆಕಟ್ಟಲು ಶೇ.4ರಷ್ಟು ಬಡ್ಡಿದರದಲ್ಲಿ 9ಲಕ್ಷರೂ.ಸಾಲವನ್ನು ನೀಡಲಾಗುವುದು. ಅಷ್ಟೇ ಅಲ್ಲದೇ ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರು, ಬಡವರು ಗ್ರಾಮೀಣ ಪ್ರದೇಶದಲ್ಲಿ ಹೊಸ ಮನೆಕೊಳ್ಳಲು 12ಲಕ್ಷರೂ. ಸಾಲ ಕೊಂಡರೆ ಶೇ.3ರಷ್ಟು ಬಡ್ಡಿಯಲ್ಲಿ ರಿಯಾಯಿತಿ ದೊರಕಲಿದೆ ಎಂದಿದ್ದಾರೆ.

ರೈತರು ರುಪೇ ಕಾರ್ಡ್ ಬಳಸಿ ಸಹಕಾರಿ ಬ್ಯಾಂಕ್ ಗಳಲ್ಲಿ ಖರೀದಿ ನಡೆಸಬಹುದು. 3ಕೋಟಿ ಕಿಸಾನ್ ಕಾರ್ಡ್ ಮುಂದಿನ ಮೂರು ದಿನಗಳಲ್ಲಿ ರುಪೇ ಕಾರ್ಡ್ ಆಗಿ ಬದಲಾವಣೆಯಾಗಲಿದೆ. ಗರ್ಭಿಣಿಯರಿಗೆ ಪೌಷ್ಠಿಕ  ಆಹಾರಕ್ಕಾಗಿ 6000ರೂ. ಆರ್ಥಿಕ ಸಹಾಯ ನೀಡಲಾಗುತ್ತಿದ್ದು, ನೇರವಾಗಿ ಗರ್ಭಿಣಿಯರ ಅಕೌಂಟ್ ಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ..

ಹಿರಿಯ ನಾಗರಿಕರು ಬ್ಯಾಂಕ್ ನಲ್ಲಿ 7.5 ಲಕ್ಷರೂ.ಗಳವರೆಗೆ 10ವರ್ಷಗಳವರೆಗೆ ಹಣ ಠೇವಣಿ ಇಟ್ಟಲ್ಲಿ 8ರಷ್ಟು ಬಡ್ಡಿದರ ನೀಡಲಾಗುವುದು ಎಂದಿದ್ದಾರೆ.

 

 

Leave a Reply

comments

Related Articles

error: