ಕರ್ನಾಟಕಪ್ರಮುಖ ಸುದ್ದಿ

ಹಾಸನಕ್ಕಾಗಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ: ಸಿಎಂ ಎಚ್‍ಡಿಕೆ

ಹಾಸನ (ನ.3): ಹಾಸನ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿಗೆ ನೀಲ ನಕಾಶೆ ಸಿದ್ದವಾಗುತ್ತಿದ್ದು ಶೀಘ್ರದಲ್ಲೇ ಅದಕ್ಕೊಂದು ರೂಪ ಹಾಗೂ ಚಾಲನೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಸಚಿವರು, ಶಾಸಕರು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಈ ಮಾಹಿತಿ ನೀಡಿದರು.

ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹೇಮಾವತಿ, ಯಗಚಿ ಬೇಲೂರು ಹಳೇ ಬೀಡುಗಳನ್ನು ಕೇಂದ್ರ ವನ್ನಾಗಿರಿಸಿಕೊಂಡು ರೂ. 15 ಕೋಟಿಗೂ ಅಧಿಕ ಮೊತ್ತದ ಪ್ರವಾಸಿ ಆಕರ್ಷಣೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಜೈಪುರ ಮೂಲಕ ಇಂಟೆಕ್ ವಾಸ್ತು ವಿನ್ಯಾಸ ಸಂಸ್ಥೆ ಪ್ರಾರಂಭಿಕ ಹಂತದ ನೀಲ ನಕಾಶೆ ಸಿದ್ದಪಡಿಸಿ ನೀಡಿದೆ. ಪ್ರಾರ್ಥಮಿಕ ಹಂತದ ಪರಿಶೀಲನೆ ಹಾಗೂ ಚರ್ಚೆಗಳು ನಡೆದಿದ್ದು ಬೆಂಗಳೂರಿನಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಬೇಲೂರು ಹಾಗೂ ಯಗಚಿ ಅಣೆಕಟೆಗಳ ಮುಂಭಾಗ ಬೃಂದಾವನಕ್ಕಿಂತಲೂ ಆಕರ್ಷೇಣಿವಾದ ಉದ್ಯಾನವನ, ಥೀಂ ಪಾರ್ಕ್, ಜಲಸಾಹಸ ಮನರಂಜನೆಗಳು, ಕ್ರೀಡೆಗಳು, ರಾತ್ರಿ ಸಫಾರಿ, ವಾಸ್ತು ವಿನ್ಯಾಸ ಸೌಂದರ್ಯಾಭಿವೃದ್ಧಿಗೆ ಯೋಜಿಸಲಾಗಿದೆ. ಚನ್ನಪಟ್ಟಣ ಕೆರೆ ಆವರಣದಲ್ಲಿ ವಿಶೇಷ ಅಭಿವೃದ್ಧಿ ಚಟುಚಟಿಕೆಗಳು ನಡೆಯಲಿವೆ.

ಜಿಲ್ಲೆಯಲ್ಲಿ ಎಲ್ಲಾ ಪ್ರವಾಸೋದ್ಯಮ ಅಭಿವೃದ್ದಿಗೆ ಸಾವಿರಾರು ಕೋಟಿ ವೆಚ್ಚವಾಗಲಿದ್ದು ಚೀನಾ, ಜಪಾನ್ ಮತ್ತಿತರ ದೇಶಗಳಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದಾಗಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಇದರಿಂದ ಅನುಕೂಲವಾಹಲಿದೆ ಎಂದು ಕುಮಾರಸ್ವಮಿ ಮಾಹಿತಿ ನೀಡಿದರು.

ಈಗಾಗಲೇ ಅಭಿವೃದ್ದಿ ಬಜೆಟ್‍ನಲ್ಲಿ 50 ಕೋಟಿ ಮೀಸಲಿರಿಸಲಾಗಿದ್ದು ಹಂತದ ಯೋಜನೆಗೆ ರೂ. 126 ಕೋಟಿ ಅನುದಾನ ಒದಗಿಸಲಾಗುವುದು ಮುಂಬರುವ ಕ್ಯಾಬಿನೆಟ್‍ನಲ್ಲಿ ಈ ವಿಷಯ ಚರ್ಚಿಸಿ ಅನುಮೋದನೆ ದೊರೆಕಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ಈ ವರ್ಷ ಬಾರಿ ಮಳೆಯಿಂದ ಜಿಲ್ಲೆಯಲ್ಲಿಯೂ ನೂರಾರು ಶಾಲಾ, ಕಾಲೇಜು ಕಟ್ಟಡಗಳು ಹಾನಿಗೀಡಾಗಿವೆ. ಅವುಗಳ ದುರಸ್ಥಿಗೆ 15 ಕೋಟಿ ರೂ ಅನುದಾನ ಒದಗಿಸಲಾಗುವುದು. ಬೇಲೂರಿ ತಾಲ್ಲೂಕಿನಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದ್ದು ಅದನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಬಗ್ಗೆ ಗಮನ ಹರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಸತಿ ಹೀನ ಬಡವರನ್ನು ಗುರುತಿಸಿ ಸೂಕ್ತ ನಿವೇಶನ ಮತ್ತು ಸೌಕರ್ಯ ಒದಗಿಸಲು ಸೂಚನೆ ನೀಡಲಾಗಿದೆ ಎಂದ ಮುಖ್ಯಮಂತ್ರಿ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳ ರೈತರ ಸಾಲಮನ್ನಾಕ್ಕೆ ಬಜೆಟ್‍ನಲ್ಲಿಯೂ ಅನುದಾನ ಘೊಷಿಸಿದೆ. ಸಹಾಕಾರ ಬ್ಯಾಂಕ್‍ಗಳ ಸಾಲಮನ್ನಾ ಕಂತುಗಳು ಬಿಡುಗಡೆಯಾಗಿದೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಈಗ ಸಹಕಾರ ನೀಡುವ ಸೂಚನೆ ನೀಡಿವೆ ಇದೇ ತಿಂಗಳು 10ಲಕ್ಷ ಜನರಿಗೆ ಖುಣ ಮುಕ್ತ ಪತ್ರ ವಿತರಿಸಲಾಗುವುದು ಎಂದು ಅವರು ಹೇಳಿದರು.

ಯಾವುದೇ ರೈತರು ಕೃಷಿಗಾಗಿ ಸಾಲದ ಹೊರೆ ಹೊರುವಂತಾಗಬಾರದು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು ಅದಕ್ಕೆ ಕೃಷಿ ಯೋಜನೆಗಳ ಮಾರ್ಪಡಿಗೆ ಚಿಂತನೆ ನಡೆಸಲಾಗಿದೆ ಪ್ರತಿಯೊಬ್ಬ ನಾಗರೀಕರೂ ನೆಮ್ಮದಿಯಿಂದ ಗೌರವಯುತ ಜೀವನ ನಡೆಸುವಂತಾಗಬೇಕು ಅದಕ್ಕಾಗಿ ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಹಾಸನಾಂಬೆ ದರ್ಶನ ಪಡೆದು ಪ್ರಾರ್ಥನೆ ಸಮರ್ಪಿಸಿದ್ದೇನೆ ಜಿಲ್ಲಾ ಅಭಿವೃದ್ದಿಗೆ ಶಾಶ್ವತ ಬೃಹತ್ ಯೋಜನೆ ನೀಡಬೇಕೆಂಬುದು ತಮ್ಮ ಹಂಬಲ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಾಗಿದೆ ಅದನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೇಳಿದರು. ರೈತರ ಭೂದಾಖಲೆಗಳನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಕಲಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾಸ ಹೆಚ್.ಡಿ. ರೇವಣ್ಣ ಅವರು ಮಾತನಾಡಿ ಜಿಲ್ಲೆಯ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಶಿಕ್ಷಣಿಕ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸಲಾಗಿದೆ. ದಶಕದಿಂದ ನೆನೆಗುದಿಗೆ ಬಿದಿದ್ದ ಅಭಿವೃದ್ದಿ ಚಟುವಟಿಕೆಗಳಿಗೆ ಚುರುಕು ನೀಡಲಾಗಿದೆ ಎಂದರು.

ಸಚಿವರಾದ ಸಾ.ರಾ. ಮಹೇಶ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿ.ಆರ್. ಬಾಲಕೃಷ್ಣ, ಕೆ. ಲಿಂಗೇಶ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಯಶಂಕರ್, ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಎ.ಎನ್. ಪ್ರಕಾಶ್ ಗೌಡ ಮತ್ತಿತರರು ಸಭೆಯಲ್ಲಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: