ಮೈಸೂರು

ಸಾವಯುವ ಹಾಗೂ ನೈಸರ್ಗಿಕ ಕೃಷಿಕರ ಸಂತೆ ನಾಳೆ

ಮೈಸೂರು,ನ.3 : ಸ್ವದೇಶಿ ಜಾಗರಣ ಮಂಚ್ ಹಾಗೂ ಜನಚೇತನ ಟ್ರಸ್ಟ್ ಜಂಟಿಯಾಗಿ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಪ್ರತಿಮೆ ಬಳಿ ‘ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆ’ ಎಂಬ ರೈತ ಸಂತೆಯನ್ನು ಏರ್ಪಡಿಸಲಾಗಿದೆ.

ಸಂತೆಯಲ್ಲಿ ಸಾವಯುವ ಬೆಳೆ, ತರಕಾರಿ, ಧಾನ್ಯಗಳು, ದೇಶಿ ಹಸುವಿನ ಹಾಲು, ಮೊಸರು, ಬೆಣ್ಣೆ, ತುಪ್ಪ, ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ ತಿನಿಸು, ಉಪ್ಪಿನಕಾಯಿ, ಉಂಡೆ ಮೊದಲಾದವುಗಳು ಲಭ್ಯವಿರಲಿದೆ.

ಸಂತೆಯು ನಾಳೆ (4) ಬೆಳಗ್ಗೆಯಿಂದ ಜರುಗಲಿದೆ ಎಂದು ಮಂಚ್ ನ ರಾಜ್ಯ ಸಂಯೋಜಕ ಎನ್.ಆರ್.ಮಂಜುನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: