ಮೈಸೂರು

ಯುವಜನತೆಗೆ ಸಂಪ್ರದಾಯದ ಅರಿವಿಲ್ಲ : ವಿಶ್ವಸಂತೋಷ ಸ್ವಾಮೀಜಿ ಬೇಸರ

%e0%b2%9a%e0%b2%be-1ಹಿರಿಯರು ವೈಜ್ಞಾನಿಕ ಹಿನ್ನೆಲೆಯಲ್ಲಿ ಹುಟ್ಟುಹಾಕಿದ ಸಂಪ್ರದಾಯವನ್ನು ಯುವಜನತೆ ಅರ್ಥಮಾಡಿಕೊಳ್ಳದೇ ನಡೆದುಕೊಳ್ಳುತ್ತಿರುವುದರಿಂದ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ ಎಂದು ಉಡುಪಿ ಜಿಲ್ಲೆ ಬಾರ್ಕೂರು ಹರಿಹರಾತ್ಮಕ ಪೀಠದ ವಿಶ್ವಸಂತೋಷ ಭಾರತಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆ.ಎಸ್.ಎಸ್ ವಿದ್ಯಾಪೀಠ, ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಏರ್ಪಡಿಸಲಾದ ಶಿವಾನುಭವ ದಾಸೋಹ ವಿಶೇಷ ಸಾಂಸ್ಕೃತಿಕ   ಕಾರ್ಯಕ್ರಮದಲ್ಲಿ ಶರಣರು ಕಂಡಂತೆ ಜೀವನ ಮೌಲ್ಯ ಕುರಿತ ವಿಶೇಷ  ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಧುನಿಕತೆಯ ಭರದಲ್ಲಿ ಹಿರಿಯರು ಹಾಕಿಕೊಟ್ಟ ರೀತಿ, ನೀತಿ, ಸಂಪ್ರದಾಯಗಳು ಮರೆಯಾಗುತ್ತಿದ್ದು, ಜೀವನ ಮೌಲ್ಯ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು. ಜೀವನಮೌಲ್ಯ ಹೇಗಿರಬೇಕು ಎನ್ನವುದನ್ನು ದಾಸರು, ವಚನಕಾರರು ತಮ್ಮ ಕೀರ್ತನೆ, ವಚನಗಳ ಮೂಲಕ ಸುಲಭವಾಗಿ ತಿಳಿಸಿದ್ದು, ಅದನ್ನು ಅರ್ಥ ಮಾಡಿಕೊಳ್ಳದ ಜನತೆ ಜೀವನದಲ್ಲಿ ನೆಮ್ಮದಿ, ಶಾಂತಿಯನ್ನು ಕಳೆದುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರಯ್ಯ ಅವರ ನಂದಿಧ್ವಜ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ನೃತ್ಯ, ಗಾಯನ ಸೇರಿದಂತೆ ಭಾವೈಕ್ಯತಾ ಕಾರ್ಯಕ್ರಮ ಜರುಗಿತು.

Leave a Reply

comments

Related Articles

error: